ADVERTISEMENT

ಮೆಣಸಿನಕಾಯಿ ಆವಕದಲ್ಲಿ ದಿಢೀರ್‌ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 13:49 IST
Last Updated 18 ಜನವರಿ 2024, 13:49 IST

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 28,506 ಕ್ವಿಂಟಲ್‌ (1,14,026 ಚೀಲ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ದಿಢೀರ್‌ ಹೆಚ್ಚಳವಾಗಿದೆ.

ಪ್ರಸಕ್ತ ಹಂಗಾಮಿನಲ್ಲಿ 2ನೇ ಬಾರಿಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಚೀಲ ಮೆಣಸಿನಕಾಯಿ ಆವಕವಾದಂತಾಗಿದೆ. ಕಳೆದ ಮಂಗಳವಾರ ಮಾರುಕಟ್ಟೆಗೆ 10,140 ಕ್ವಿಂಟಲ್ (40,562 ಚೀಲ) ಆವಕವಾಗಿತ್ತು. ಸೋಮವಾರ ಮತ್ತು ಗುರುವಾರ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಆವಕವಾಗುತ್ತಿದ್ದು, ಕಳೆದ ಸೋಮವಾರ ಸಂಕ್ರಾಂತಿ ಪ್ರಯುಕ್ತ ರಜೆ ನೀಡಲಾಗಿತ್ತು. ಹೀಗಾಗಿ ಗುರುವಾರ ಆವಕದಲ್ಲಿ ದಿಢೀರ್‌ ಹೆಚ್ಚಳ ಕಂಡು ಬಂದಿದೆ.

ಗುರುವಾರ ಮಾರುಕಟ್ಟೆಗೆ ಒಟ್ಟಾರೆ 18,045 ಲಾಟ್‌ ಮೆಣಸಿನಕಾಯಿ ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 335 ಲಾಟ್‌ಗಳಿಗೆ ಟೆಂಡರ್‌ ನಮೂದಿಸಿಲ್ಲ. 2 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ ಗೆ ₹ 62,099 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು ಕಳೆದ ಮಂಗಳವಾರಕ್ಕಿಂತ ₹ 10ಸಾವಿರ ಹೆಚ್ಚಳವಾಗಿದೆ. 5 ಚೀಲ ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 54,419 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು, ಕಳೆದ ಮಂಗಳವಾರಕ್ಕಿಂತ ಕ್ವಿಂಟಲ್‌ಗೆ ₹ 9 ಸಾವಿರ ಹೆಚ್ಚಳ ಕಂಡು ಬಂದಿದೆ. ಗುಂಟೂರ ತಳಿ ಮೆಣಸಿನಕಾಯಿ ₹ 18,309 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದ್ದು ಸ್ಥಿರತೆ ಕಾಯ್ದುಕೊಂಡಿದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹ 40,109, ಬ್ಯಾಡಗಿ ಕಡ್ಡಿ ₹ 37,129 ಹಾಗೂ ಗುಂಟೂರ ತಳಿ ₹ 14,929 ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 384 ಖರೀದಿ ವರ್ತಕರು ಪಾಲ್ಗೊಂಡಿದ್ದು 1.67 ಲಕ್ಷ ಬಾರಿ ಬಿಡ್‌ ಮಾಡಿದ್ದಾರೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.