ರಾಣೆಬೆನ್ನೂರು: ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ, ನೇರ ಹಣಾಹಣಿಗೆಸಾಕ್ಷಿಯಾದ ರಾಣೆಬೆನ್ನೂರು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಪೂಜಾರ್ ಗೆಲುವು ಸಾಧಿಸಿದ್ದಾರೆ.
ಟಿಕೆಟ್ ಪೈಪೋಟಿಯಲ್ಲಿ ಘಟಾನುಘಟಿ ನಾಯಕರನ್ನು ಹಿಂದಿಕ್ಕಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಅರುಣಕುಮಾರ್, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ ಎದುರು23,222 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. 2018ರ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಆರ್.ಶಂಕರ್ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಕ್ಕೆ ಡಿ.05ರಂದು ಚುನಾವಣೆ ನಡೆದಿತ್ತು.
ಕೋಳಿವಾಡ ಕಳೆದ ಚುನಾವಣೆಯಲ್ಲಿಶಂಕರ್ ಎದುರು ಕೇವಲ4,338 ಮತಗಳ ಅಂತರದಿಂದ ಸೋಲು ಕಂಡಿದ್ದರು. ಹಾಗಾಗಿ ಅವರಿಗೂ ರಾಜಕೀಯವಾಗಿ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಆರಂಭದಲ್ಲಿ ಕೋಳಿವಾಡ ಗೆಲ್ಲುವ ಲೆಕ್ಕಾಚಾರವಿತ್ತು. ಆದರೆ, ದಿನಕಳೆದಂತೆ ಕ್ಷೇತ್ರದಲ್ಲಿ ಚಿತ್ರಣ ಬದಲಾಗುತ್ತಾ ಸಾಗಿತ್ತು.
ಕ್ಷೇತ್ರದಲ್ಲಿ ಒಟ್ಟು2,33,137ಮತದಾರಿದ್ದು,1,70,303 ಮಂದಿಮತ ಚಲಾಯಿಸಿದ್ದರು.ಅರುಣಕುಮಾರ್ 95,438 ಮತಗಳನ್ನು ಪಡೆದು ಜಯದ ನಗೆ ಬೀರಿದರೆ, ಕೋಳಿವಾಡ 72,216 ಮತ ಪಡೆದರು. ಜೆಡಿಎಸ್ ಅಭ್ಯರ್ಥಿಮಲ್ಲಿಕಾರ್ಜುನಪ್ಪ ಹಲಗೇರಿ 979 ಮತ ಪಡೆದರು. ಕ್ಷೇತ್ರದ 16,08 ಮಂದಿ ನೋಟಾ ಒತ್ತಿದ್ದಾರೆ. 13 ಮತಗಳು ತಿರಸ್ಕೃತಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.