ADVERTISEMENT

ರಾಣೆಬೆನ್ನೂರು | ಗಾಯಗೊಂಡ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 16:05 IST
Last Updated 23 ಮಾರ್ಚ್ 2024, 16:05 IST

ರಾಣೆಬೆನ್ನೂರು: ಈಚೇಗೆ ಹಾವೇರಿ - ರಾಣೆಬೆನ್ನೂರು ರಸ್ತೆಯಲ್ಲಿ ಯು ಟರ್ನ್‌ ಬಳಿ ಆಟೊಗೆ ಬಸ್ ಗುದ್ದಿದ ಘಟನೆಯಲ್ಲಿ ಗಾಯಗೊಂಡು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಟೊ ಚಾಲಕ ಶುಕ್ರವಾರ ಆಂಬುಲೆನ್ಸ್‌ನಲ್ಲಿ ರಾಣೆಬೆನ್ನೂರಿಗೆ ಕರೆತರುವಾಗ ಮೃತಪಟ್ಟಿದ್ದಾರೆ.

ಆಟೊ ಚಾಲಕ ನಗರದ ಜುಮ್ಮಾ ಮಸೀದಿ ನಿವಾಸಿ ಖಲೀಲ ಅಹ್ಮದ ನೂರಾಹ್ಮದಸಾಬ ಲೋಹಾರ (52) ಮೃತಪಟ್ಟವರು. ಹಾವೇರಿಯ ವಿದ್ಯಾನಗರದ ಶಹಜಾನ್‌ ಖಲೀಲಸಾಬ ವಾಲೀಕಾರ ಅವರು ಕೆಎಸ್‌ಆರ್‌ಟಿಸಿ ಬಸ್‌ ಅನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲಾಗದೇ ಆಟೊಗೆ ಗುದ್ದಿದ್ದರು ಎನ್ನಲಾಗಿದೆ. ಗಾಯಗೊಂಡ ಖಲೀಲ ಅಹ್ಮದ ನೂರಾಹ್ಮದಸಾಬ ಲೋಹಾರ ಅವರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಸಿಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮಂಗಳೂರಿನ ಎನ್‌ಪೋಯಾ ಆಸ್ಪತ್ರೆಯಲ್ಲಿ ಉಪಚರಿಸಿ ಮರಳಿ ರಾಣೆಬೆನ್ನೂರಿನ ಓಂ ಆಸ್ಪತ್ರೆಗೆ ದಾಖಲಿಸಲೆಂದು ಆಂಬುಲೆನ್ಸ್‌ನಲ್ಲಿ ತರುವಾಗ ಬಸ್‌ ನಿಲ್ದಾಣದ ಬಳಿ ಮೃತಪಟ್ಟರು. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಣೆ: ದೂರು ದಾಖಲು

ರಾಣೆಬೆನ್ನೂರು: ತಾಲ್ಲೂಕಿನ ಮೇಡ್ಲೇರಿ ಗ್ರಾಮದ ವ್ಯಾಪ್ತಿಯ ತುಂಗಭದ್ರಾ ನದಿ ಪಾತ್ರದಲ್ಲಿ ಮಜ್ಡಾ ವಾಹನದಲ್ಲಿ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ 3 ಕ್ಯೂಬಿಕ್‌ ಮೀಟರ್‌ ಮರಳನ್ನು ಗ್ರಾಮೀಣ ಠಾಣೆ ಪೊಲೀಸರು ಜಪ್ತು ಮಾಡಿ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಅನಾರೋಗ್ಯದಿಂದ ವ್ಯಕ್ತಿ ಸಾವು

ರಾಣೆಬೆನ್ನೂರು: ಇಲ್ಲಿಯ ಅಂಚೆ ಕಚೇರಿ ವೃತ್ತದಲ್ಲಿ ಎಸ್‌ಬಿಐ ಬ್ಯಾಂಕ್‌ ಬಳಿ ಅಸ್ವಸ್ಥಗೊಂಡು ಕುಳಿತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ದಾವಣಗೆರೆ ಎಸ್‌ಎಸ್‌ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಜೋಯಿಸರಹರಳಹಳ್ಳಿ ಗ್ರಾಮದ ವಿಶ್ವನಾಥ ವಿಠಲಾಚಾರ ಬಡಿಗೇರ (31) ಮೃತಪಟ್ಟವರು.

ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಗೆಂದು ನಗರದ ಸಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್‌ಎಸ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೃತನ ತಂದೆ ವಿಠಲಾಚಾರ ಶಂಕರಾಚಾರ್ಯ ಬಡಿಗೇರ ದೂರು ಸಲ್ಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.