ADVERTISEMENT

ಗುಂಡಿಗೆ ಬಿದ್ದು ಮೂವರು ಮಕ್ಕಳ ದುರ್ಮರಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 16:21 IST
Last Updated 24 ಅಕ್ಟೋಬರ್ 2020, 16:21 IST
ಬ್ಯಾಡಗಿ ಪಟ್ಟಣದ ಶಾಲಾ ಕಟ್ಟಡ ಕಾಮಗಾರಿಯ ಅಡಿಪಾಯಕ್ಕೆ ತೆಗೆದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಮಕ್ಕಳ ಮೃತದೇಹವನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು 
ಬ್ಯಾಡಗಿ ಪಟ್ಟಣದ ಶಾಲಾ ಕಟ್ಟಡ ಕಾಮಗಾರಿಯ ಅಡಿಪಾಯಕ್ಕೆ ತೆಗೆದ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಮಕ್ಕಳ ಮೃತದೇಹವನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು    

ಬ್ಯಾಡಗಿ: ಪಟ್ಟಣದ ಸಂತೆ ಮೈದಾನದಲ್ಲಿ ಶಾಲಾ ಕಟ್ಟಡ ಕಾಮಗಾರಿಯ ಅಡಿಪಾಯಕ್ಕೆ ತೆಗೆದ ಗುಂಡಿಯಲ್ಲಿ ಮುಳುಗಿ ಮೂರು ಮಕ್ಕಳು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಗೋವಾದಿಂದ ದೇವಿಹೊಸೂರು ಗ್ರಾಮದಅಜ್ಜನ ಮನೆಗೆ ಬಂದಿದ್ದ ಇನಾಯತ್‌ ಹಾವಣಗಿ ಅವರ ಮಕ್ಕಳಾದ ಸೈಯದ್‌ ಅಕ್ಮಲ್‌ (8), ಸೈಯದ್‌ ಆಶ್ಫಕ್‌‌ (10) ಹಾಗೂ ಕುಂಬಾರ ಓಣಿಯ ಜಾಫರ್‌ ಅನಾಮುಲ್ಲಾ ಸವಣೂರ (10) ಮೃತಪಟ್ಟ ಮಕ್ಕಳು.

ಸಂತೆಗೆ ಹೊರಟಿದ್ದ ತಾಯಿಯನ್ನು ಹಿಂಬಾಲಿಸಿ ಬರುತ್ತಿದ್ದ ಮಕ್ಕಳನ್ನು ವಾಪಸ್‌ ಮನೆಗೆ ಕಳುಹಿಸಲಾಗಿತ್ತು. ಆದರೆ ಮೂರು ಮಕ್ಕಳು ಸೇರಿಕೊಂಡು ಆಟವಾಡಲು ಶಾಲಾ ಮೈದಾನಕ್ಕೆ ತೆರಳಿದ್ದವು. ಈ ಸಂದರ್ಭದಲ್ಲಿಗುಂಡಿಯಲ್ಲಿ ಬಿದ್ದು ಮೃತಪಟ್ಟಿವೆ ಎನ್ನಲಾಗಿದೆ.

ADVERTISEMENT

ತಾಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು. ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ವೈಯಕ್ತಿಕವಾಗಿ ತಲಾ ಮಕ್ಕಳಿಗೆ ₹25 ಸಾವಿರ ಹಾಗೂ ಸರ್ಕಾರದಿಂದ ತಲಾ ಮಕ್ಕಳಿಗೆ ₹5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.