ADVERTISEMENT

ರಾಣೆಬೆನ್ನೂರು: ಬೆಳೆ ವಿಮೆ ಹಣ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:43 IST
Last Updated 30 ಜುಲೈ 2024, 15:43 IST
ಪೂರ್ಣ ಪರಿಹಾರದ ಬೆಳೆ ವಿಮೆ ಹಣವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ರಾಣೆಬೆನ್ನೂರಿನ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಪೂರ್ಣ ಪರಿಹಾರದ ಬೆಳೆ ವಿಮೆ ಹಣವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ರಾಣೆಬೆನ್ನೂರಿನ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ರಾಣೆಬೆನ್ನೂರು: ಮಧ್ಯಂತರ ಪರಿಹಾರ ದೊರೆತ ಎಲ್ಲಾ ರೈತರಿಗೆ ಪೂರ್ಣ ಪರಿಹಾರದ ಬೆಳೆ ವಿಮೆ ಹಣವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಬಸ್‌ ನಿಲ್ದಾಣದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು. ನಂತರ ಉಪ ತಹಶೀಲ್ದಾರ್‌ ವಿ.ಎಸ್‌.ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ‘ವಿಮಾ ಕಂಪನಿಯವರು ನಿಯಮಗಳನ್ನು ಮೀರಿ ಮಧ್ಯಂತರ ವಿಮಾ ಪರಿಹಾರ ನೀಡಿದೇ, ರೈತರಿಗೆ ಶೇ 75 ಹಣವನ್ನು ಬಿಡುಗಡೆ ಮಾಡದೇ, ಕೆಲ ಭಾಗಗಳಲ್ಲಿ ಬೆಳೆ ಇಳುವರಿ ಬಂದಿದೆ ಎಂಬ ತಾಂತ್ರಿಕ ಕಾರಣಗಳನ್ನು ನೀಡುತ್ತ ರೈತರಿಗೆ ವಂಚಿಸುವುದು ಸರಿಯಲ್ಲ’ ಎಂದರು.

‘ಕೂಡಲೇ ಹಣ ಬಿಡುಗಡೆ ಮಾಡದಿದ್ದರೆ ಹಾವೇರಿ ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಹಲಗೇರಿ ಮಾತನಾಡಿ, ‘ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಮಾ ಕಂಪನಿ ಜತೆಗೆ ಮಾತನಾಡಿ ರೈತರಿಗೆ ವಿಮಾ ಹಣ ಕೊಡಿಸಲು ಮುಂದಾಗಬೇಕು’ ಎಂದರು.

ಯಲ್ಲಪ್ಪ ಓಲೇಕಾರ, ಸುರೇಶ ಮಲ್ಲಾಪುರ, ವಿರುಪಾಕ್ಷಗೌಡ ಪಾಟೀಲ, ಸುಶಿಲಮ್ಮ ಅಮರಾವತಿ, ತಿಪ್ಪಣ್ಣ ಜೋಗಿ, ವಿಶ್ವನಾಥ ಕೆಂಪಣ್ಣನವರ, ಚಂದ್ರಪ್ಪ ಕೆಂಪಣ್ಣನವರ, ಕೆ.ವಿ. ರುದ್ರಮುನಿ, ಎಂ.ಬಿ. ಸಂದಿಮನಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.