ಹಾವೇರಿ:ಹಾಸ್ಟೆಲ್ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವ ‘ಡಿಜಿ ಲಾಕರ್’ (ವಿದ್ಯುನ್ಮಾನ ಲಾಕರ್) ವ್ಯವಸ್ಥೆಯನ್ನು ನಗರದಲ್ಲಿನ ಪರಿಶಿಷ್ಟ ವರ್ಗದ ಕಾಲೇಜು ವಿದ್ಯಾರ್ಥಿನಿಯರ ನಿಲಯದಲ್ಲಿ ಅನುಷ್ಠಾನಗೊಳಿಸಲಾಗಿದೆ.
ಸೆ.20ರಂದು ಅಧಿಕೃತವಾಗಿ ಡಿಜಿ ಲಾಕರ್ ವ್ಯವಸ್ಥೆ ಉದ್ಘಾಟನೆಗೊಳ್ಳಲಿದೆ. ರಾಜ್ಯದ ವಿದ್ಯಾರ್ಥಿ ನಿಲಯಗಳ ಪೈಕಿ ಡಿಜಿ ಲಾಕರ್ ವ್ಯವಸ್ಥೆ ಜಾರಿಗೊಳಿಸಿದ ಮೊದಲ ವಿದ್ಯಾರ್ಥಿ ನಿಲಯಗಳ ಎಂಬ ಕೀರ್ತಿಯು ಹಾವೇರಿ ಜಿಲ್ಲೆಗೆ ಸಲ್ಲಲಿದೆ. ಈ ಚೊಚ್ಚಲ ವ್ಯವಸ್ಥೆಯನ್ನು ಗುರುವಾರ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಪರಿಶೀಲಿಸಿದರು.ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಸುರೇಶ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.