ಕುಮಾರಪಟ್ಟಣ: ಇಲ್ಲಿಗೆ ಸಮೀಪದ ನದಿಹರಳಹಳ್ಳಿ ಬಳಿ ಇರುವ ಹಳ್ಳವೊಂದರಲ್ಲಿ ನಿಂತಿರುವ ನೀರಿನಲ್ಲಿ ತಮಿಳುನಾಡು ಮೂಲದ ಎಂಟತ್ತು ಕುಟುಂಬದವರು ತಮ್ಮ ಸಾವಿರಾರು ಬಾತುಕೋಳಿಗಳನ್ನು ಮೇಯಿಸುತ್ತಿರುವ ದೃಶ್ಯ ಭಾನುವಾರ ಕಂಡು ಬಂದಿತು'.
ತಮಿಳುನಾಡಿನಿಂದ ಕುಟುಂಬ ಸಮೇತರಾಗಿ ಬಂದು ರಾಜ್ಯ ವಿವಿಧ ಭಾಗಗಳಲ್ಲಿ ನೆಲೆಸಿ ಕುರಿ ಹಿಂಡಿನಂತೆ ಸಾಕಿರುವ ಬಾತು ಕೋಳಿಗಳನ್ನು ಹೆಚ್ಚಾಗಿ ನೀರಿರುವ ಹಳ್ಳ-ಕೊಳ್ಳಗಳಲ್ಲಿ ಮೇಯಿಸುತ್ತಾರೆ. ಊರಿನ ಹೊರ ವಲಯದಲ್ಲಿ ತಮ್ಮ ತಾತ್ಕಾಲಿಕ ಗುಡಾರಗಳನ್ನು ಹಾಕಿಕೊಂಡು ಅವರು ಸಾಕಿದ ಬಾತು ಕೋಳಿಗಳನ್ನು ನಂಬಿಕೊಂಡು ದುಡಿಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಅವರು ತಮಿಳುನಾಡು ರಾಜ್ಯದ ವೆಲ್ಲೂರ್ನಿಂದ ಬಂದು ಇದೇ ದುಡಿಮೆ ನಂಬಿ ಊರೂರು ಅಲೆಯುತ್ತ ಜೀವನ ಸಾಗಿಸುತ್ತಿದ್ದೇವೆ. ಇವು ಮಾಲೀಕ ಶ್ರೀನಿವಾಸನ್ ಅವರಿಗೆ ಸೇರಿದ್ದು, 300-ರೂಗಳಿಗೆ ಒಂದರಂತೆ ಮಾರಾಟ ಮಾಡಲಾಗುತ್ತದೆ. ನಮಗೆ ದಿನಕ್ಕೆ 250 ಕೂಲಿ ಕೊಡುತ್ತಾರೆ ಎಂದು ಕೂಲಿ ಕಾಮರ್ಿಕರೊಬ್ಬರ ಅಭಿಪ್ರಾಯ.
ವರ್ಷದಲ್ಲೊಮ್ಮೆ ಲಾರಿಗಳಲ್ಲಿ ಹೇರಿಕೊಂಡು ಬಂದ ಬಾತು ಕೋಳಿಗಳನ್ನು ಕೆಲ ರೈತರು ಭತ್ತ ನಾಟಿ ಮಾಡುವ ಮುನ್ನ ಜಮೀನಿನಲ್ಲಿರುವ ಜಿಗಳಿ ಹುಳುಗಳನ್ನು ತಿನ್ನಲು ಬಾತು ಕೋಳಿಗಳಿಗೆ ಅವಕಾಶ ಕಲ್ಪಿಸುತ್ತಾರೆ ಎಂದು ಗ್ರಾಮಸ್ಥ ಶಿವಕುಮಾರ್ ಜಾಧವ ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.