ADVERTISEMENT

ಅಜ್ಞಾನದ ಕತ್ತಲೆಯಲ್ಲಿ ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗಲಿ: ಹೊನ್ನಾಳಿ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 15:46 IST
Last Updated 29 ಡಿಸೆಂಬರ್ 2023, 15:46 IST
ರಾಣೆಬೆನ್ನೂರಿನ ವಾಗೀಶನಗರದ ವೀರಭದ್ರದೇವರ ದೇವಸ್ಥಾನದಲ್ಲಿ ವೀರಭದ್ರ ಸ್ವಾಮಿಗೆ ಕಾರ್ತಿಕೋತ್ಸವದ ಅಂಗವಾಗಿ ಬೆಳ್ಳಿ ಆಭರಣಗಳನ್ನು ತೊಡಿಸಿ ಶೃಂಗರಿಸಲಾಗಿತ್ತು.
ರಾಣೆಬೆನ್ನೂರಿನ ವಾಗೀಶನಗರದ ವೀರಭದ್ರದೇವರ ದೇವಸ್ಥಾನದಲ್ಲಿ ವೀರಭದ್ರ ಸ್ವಾಮಿಗೆ ಕಾರ್ತಿಕೋತ್ಸವದ ಅಂಗವಾಗಿ ಬೆಳ್ಳಿ ಆಭರಣಗಳನ್ನು ತೊಡಿಸಿ ಶೃಂಗರಿಸಲಾಗಿತ್ತು.   

ರಾಣೆಬೆನ್ನೂರು: ಕಾರ್ತಿಕ ಮಾಸವು ಎಲ್ಲರ ಮನ ಮಂದಿರಗಳಲ್ಲಿ ಜ್ಯೋತಿ ಬೆಳಗಿಸುವಂತಹದ್ದಾಗಿದೆ. ಈ ಹಬ್ಬದ ಉದ್ದೇಶ ಮನುಷ್ಯನಲ್ಲಿ ಅಡಗಿರುವ ಅಂದಕಾರವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗಿಸುವಂತಹದ್ದಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.


ಇಲ್ಲಿನ ವಾಗೀಶನಗರದ ವೀರಭದ್ರದೇವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಾರ್ತಿಕ ಮಾಸವು ಅತ್ಯಂತ ಪ್ರವಿತ್ರ ಮಾಸ, ಕಾರ್ತಿಕ ಮಾಸದ ಜ್ಯೋತಿ ಒಗ್ಗೂಡಿ ನಡೆಯುವ ಸಂಖ್ಯೇತವಾಗಿದೆ. ಇಂತಹ ಮಾಸದಲ್ಲಿ ದೀಪ ಬೆಳಗಿಸುವ ಮೂಲಕ ಬಾಳಿನ ಕತ್ತಲನ್ನು ಕಳೆಯಬೇಕು ಎಂದರು.


ಹೊನ್ನಾಳಿ ಹಿರೇಕಲ್ಮಠದ ಒಡೆಯರ ಡಾ.ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿ, ಅಜ್ಞಾನದ ಕತ್ತಲೆಯಲ್ಲಿ ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗಲಿ ಎಂಬ ಉದ್ದೇಶದಿಂದ ಎಲ್ಲಡೆಯಲ್ಲಿಯೂ ದೀಪವನ್ನು ಹಚ್ಚುತ್ತಾರೆ. ಯಾವ ರೀತಿ ಹಣತೆ, ಎಣ್ಣೆ, ಬತ್ತಿ ತನ್ನನ್ನು ತಾನು ಸುಟ್ಟುಕೊಂಡು ಮತ್ತೋಬ್ಬರಿಗೆ ಬೆಳಕನ್ನು ಕೊಡುತ್ತದೆಯೋ, ಅದೇ ರೀತಿ ನಮ್ಮಲ್ಲಿಯ ನೋವು ನಮ್ಮಲ್ಲಿದ್ದರೂ ಕೂಡಾ ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡುವದು ಬಯಸುವಂತಹ ಕಾರ್ಯ ಮಾಡಬೇಕು ಎಂದರು.

ADVERTISEMENT


ಭಕ್ತರು ತಮ್ಮ ಮನೆಯಿಂದ ತೈಲ ತಂದು ಶ್ರದ್ದಾ ಭಕ್ತಿಯಿಂದ ನೂರಾರು ದೀಪಗಳಿಗೆ ತೈಲ ಹಾಕಿ ಸಂಭ್ರಮಿವುವ ನೋಟ ಒಂದೆಡೆಯಾದರೆ, ಮತ್ತೊಂದೆಡೆ ದೇವಸ್ಥಾನದ ಆವರಣದ ತುಂಬ ತೈಲದ ದೀಪದ ಬೆಳಕು ದೇವಸ್ಥಾನದ ಅಂಗಳವನ್ನು ಪ್ರಜ್ವಲಿಸುವಂತೆ ಮಾಡಿತ್ತು.


ಮಹಿಳೆಯರು, ಮಕ್ಕಳು ದೀಪ ಬೆಳಗಿಸಿದರು. ಸ್ಥಳೀಯ ಕಲಾವಿದ ಗುಡ್ಡಪ್ಪ ಹಿಂದಿನಮನಿ ಸಂಗೀತ ಸೇವೆ ಸಲ್ಲಿಸಿದರು. ದೇವಸ್ಥಾನದ ಅಧ್ಯಕ್ಷ ವಿರೇಶ ಮೋಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನಗರಸಭೆ ಸದಸ್ಯ ನಾಗರಾಜ ಪವಾರ, ಜಿ.ಜಿ. ಹೊಟ್ಟಿಗೌಡ್ರ, ಡಾ.ಬಸವರಾಜ ಕೇಲಗಾರ, ಬಿ.ಎಸ್‌.ಪಟ್ಟಣಶೆಟ್ಟಿ, ವಿನೋದ ಜಂಬಿಗಿ, ಶರಣಪ್ಪ ಮುಚಡಿ, ಬಾಬಣ್ಣ ಐರಣಿ, ಮಂಜುನಾಥ ಪಿ.ಆರ್‌, ವಿರುಪಾಕ್ಷಿ ಅಂಗಡಿ, ಉಮೇಶ ಪಟ್ಟಣಶೆಟ್ಟಿ, ಪುಟ್ಟರಾಜ ಅಂಗಡಿ, ಜಗದೀಶಯ್ಯ ಶಾಸ್ತ್ರಿ, ಭದ್ರಿನಾಥ ಪಿ. ಜಂಬಿಗಿ, ಕಸ್ತೂರೆಮ್ಮ ಪಾಟೀಲ, ಹರಳಹಳ್ಳಿ ಇದ್ದರು.

ರಾಣೆಬೆನ್ನೂರಿನ ವಾಗೀಶನಗರದ ವೀರಭದ್ರದೇವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಮಾಜಿ ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.