ಹಾವೇರಿ: ‘ಸಿನಿಮಾ ನೋಡಲು ಬೆಂಗಳೂರಿನ ಜಿ.ಟಿ. ಮಾಲ್‌ಗೆ ಹೋಗಿದ್ದ ನಮ್ಮ ತಂದೆಯನ್ನು ಪಂಚೆ ಧರಿಸಿದ್ದಾರೆಂಬ ಕಾರಣಕ್ಕೆ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಈ ಅವಮಾನವನ್ನು ನಾವು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ನಾವೂ ಮಾಲ್ ಕಟ್ಟಿಸಿ, ಅದಕ್ಕೆ ಅಪ್ಪನ ಹೆಸರಿಡುತ್ತೇವೆ’ ಎಂದು ರೈತ ಫಕೀರಪ್ಪ ಅವರ ಮಕ್ಕಳು ಹೇಳಿದರು.
ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ಅಪ್ಪ ರೈತ. ಮಾಲ್ ಒಳಗೆ ಬಿಡಲಿಲ್ಲವೆಂಬ ವಿಷಯ ತಿಳಿದು ನಮಗೆ ನೋವಾಯಿತು’ ಎಂದರು.
‘ಪ್ರತಿಯೊಬ್ಬ ರೈತನಿಗೆ ನಾವು ಸಲಾಂ ಹೇಳಬೇಕು. ಬಟ್ಟೆ ನೋಡಿ ಅಳೆಯಬಾರದು. ಅವಮಾನವಾದ ಮಾಲ್‌ನಲ್ಲಿಯೇ ಅಪ್ಪನಿಗೆ ಮರುದಿನ ಸನ್ಮಾನವಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.