ADVERTISEMENT

ಹಾವೇರಿ| ಮೈಸೂರು ರಂಗಾಯಣದಲ್ಲಿ ತರಬೇತಿ; ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:28 IST
Last Updated 23 ಮೇ 2023, 14:28 IST
ಬ್ಯಾಡಗಿ ಪಟ್ಟಣದ ಕಾಶೀರಾಮ ಹಾಗೂ ಮಾರುತಿ ದೇವಸ್ಥಾನಗಳ ಪುನಃಪ್ರತಿಷ್ಠಾಪನೆ ಪ್ರಯುಕ್ತ ಉತ್ಸವಮೂರ್ತಿಗಳ ಹಾಗೂ ಕಲಶಗಳ ಮೆರವಣೆಗೆ ನಡೆಯಿತು.
ಬ್ಯಾಡಗಿ ಪಟ್ಟಣದ ಕಾಶೀರಾಮ ಹಾಗೂ ಮಾರುತಿ ದೇವಸ್ಥಾನಗಳ ಪುನಃಪ್ರತಿಷ್ಠಾಪನೆ ಪ್ರಯುಕ್ತ ಉತ್ಸವಮೂರ್ತಿಗಳ ಹಾಗೂ ಕಲಶಗಳ ಮೆರವಣೆಗೆ ನಡೆಯಿತು.   

ಹಾವೇರಿ: ಮೈಸೂರು ರಂಗಾಯಣದಲ್ಲಿ 2023-24ನೇ ಸಾಲಿನ ಹತ್ತು ತಿಂಗಳ ಡಿಪ್ಲೊಮಾ ಕೋರ್ಸ್‌ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರಂಗ ತರಬೇತಿ ಕೋರ್ಸ್‌ಗೆ ಸೇರುವವರು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. 18ರಿಂದ 28 ವಯಸ್ಸಿನ ಒಳಗಿನವರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ವಸತಿ ಸಹಿತ ಮಾಸಿಕ ₹5 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು http://rangayanmysore.karnataka.gov.in ವೆಬ್‌ಸೈಟ್‌ನಿಂದ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ರಂಗಾಯಣ ಕಚೇರಿಯಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು. ಸಾಮಾನ್ಯ ವರ್ಗ ₹230, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ₹180 ಶುಲ್ಕ ನಿಗದಿಪಡಿಸಿದ್ದು, ‘ಉಪ ನಿರ್ದೇಶಕರು, ರಂಗಾಯಣ ಮೈಸೂರ’ ಇವರ ಹೆಸರಿಗೆ ಡಿಡಿ ಪಡೆದು ರಂಗಾಯಣದ ವಿಳಾಸಕ್ಕೆ ಜೂನ್‌5ರ ಒಳಗೆ ಅಂಚೆ ಮೂಲಕ ಕಳುಹಿಸಬಹುದು. ಸಂದರ್ಶನದ ದಿನಾಂಕ ಅಭ್ಯರ್ಥಿಗಳಿಗೆ ಪತ್ರ ಮೂಲಕ ತಿಳಿಸಲಾಗುವುದು. ಗರಿಷ್ಠ 15–20 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಮಾಹಿತಿಗೆ 0821-2512639/ 94489 38661/ 91488 27720/ 88675 14311 ಸಂಪರ್ಕಿಸಬಹುದು.

ADVERTISEMENT

ಉತ್ಸವ ಮೂರ್ತಿ ಕಳಶ ಮೆರವಣಿಗೆ ಬ್ಯಾಡಗಿ: ಪಟ್ಟಣದ ಚಾವಡಿ ರಸ್ತೆಯ ಕಾಶಿರಾಮ ಹಾಗೂ ಮಾರುತಿ ದೇವಸ್ಥಾನಗಳ ಪುನರ್‌ ಪ್ರತಿಷ್ಠಾಪನೆ ನೂತನ ಗೋಪುರ ಹಾಗೂ 55 ಅಡಿ ಎತ್ತರದ ರಾಜಗೋಪುರಗಳ ಕಳಸಾರೋಹಣ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಪ್ರಯುಕ್ತ ಸೋಮವಾರ ಉತ್ಸವಮೂರ್ತಿಗಳ ಹಾಗೂ ಕಲಶಗಳ ಮೆರವಣೆಗೆ ಪಟ್ಟಣದಲ್ಲಿ ಶ್ರದ್ದಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆ ಗಣಪತಿ ಪೂಜೆ ಪುಣ್ಯಾಹವಾಚನ ಮಾತೃಕಾ ಪೂಜೆ ದೇವನಾಂದಿ ಕುಲದೇವತಾ ಸ್ಥಾಪನೆ ಕೌತುಕ ಪೂಜೆ ಬ್ರಹ್ಮಕೂರ್ಚ ಹೋಮ ಮಹಾಗಣಪತಿ ಹೋಮ ನಡೆಯಿತು. ಬಳಿಕ ಚಂಡೆ ನಾದಶ್ವರ ಅಶಿಕ ಡೋಲ್ ವಾದ್ಯವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ರಾಕ್ಷೋಘ್ನ ಹೋಮ ವಾಸ್ತುಶಾಂತಿ ಬಲಿ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನ ಸಮಿತಿಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.