ADVERTISEMENT

ಬನಶಂಕರಿನಗರದಲ್ಲಿ ವಿಘ್ನೇಶ್ವರ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:45 IST
Last Updated 8 ಸೆಪ್ಟೆಂಬರ್ 2024, 13:45 IST
ರಾಣೆಬೆನ್ನೂರಿನ ಸಿದ್ಧಾರೂಢಮಠದ ಬಳಿ ಬನಶಂಕರಿನಗರದಲ್ಲಿ ಬನಶಂಕರಿ ನಾಗಕರಿಕ ಹಿತರಕ್ಷಣಾ ಸಮಿತಿಯಿಂದ ಗಣೇಶ ಮೂರ್ತಿಯನ್ನು ವಾಹನದಲ್ಲಿ ಮೆರವಣಿಗೆ ಮೂಲಕ ತರಲಾಯಿತು
ರಾಣೆಬೆನ್ನೂರಿನ ಸಿದ್ಧಾರೂಢಮಠದ ಬಳಿ ಬನಶಂಕರಿನಗರದಲ್ಲಿ ಬನಶಂಕರಿ ನಾಗಕರಿಕ ಹಿತರಕ್ಷಣಾ ಸಮಿತಿಯಿಂದ ಗಣೇಶ ಮೂರ್ತಿಯನ್ನು ವಾಹನದಲ್ಲಿ ಮೆರವಣಿಗೆ ಮೂಲಕ ತರಲಾಯಿತು   

ರಾಣೆಬೆನ್ನೂರು: ಇಲ್ಲಿನ ಸಿದ್ಧಾರೂಢಮಠದ ಸಮೀಪದ ಬನಶಂಕರಿನಗರದಲ್ಲಿ ಶನಿವಾರ ಬನಶಂಕರಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ವಿಘ್ನೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಯಿತು.

ಕುರುಬಗೇರಿಯಿಂದ ಗಣೇಶ ಮೂರ್ತಿಯನ್ನು ತೆರೆದ ವಾಹನದಲ್ಲಿ ಬನಶಂಕರಿ ನಗರದ ಉದ್ಯಾನದ ವರೆಗೆ ತರಲಾಯಿತು. ಮೆರವಣಿಗೆಯುದ್ದಕ್ಕೂ ಯುವಕರು ಗಜಾನನ ಮಹಾರಾಜ್‌ ಕೀ ಜೈ, ಗಣಪತಿ ಬಪ್ಪ ಎಂದು ಜೈಘೋಷ ಕೂಗುವ ಮೂಲಕ ಭಕ್ತಿಯನ್ನು ಮೆರೆದರು. ಬೈಕ್‌ ರ‍್ಯಾಲಿ ನಡೆಸಿದರು.

ಮಹಿಳೆಯರು ಸಾಯಿಬಾಬಾ ದೇವಸ್ಥಾನದ ಬಳಿ ವಿಘ್ನೇಶ್ವರ ಮೂರ್ತಿಗೆ ಆರತಿ ಬೆಳಗಿ ಸ್ವಾಗತಿಸಿದರು.

ADVERTISEMENT

ಬನಶಂಕರಿನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರಭಾಕರ ಮುದಗಲ್ಲ, ಕಾರ್ಯದರ್ಶಿ ಪ್ರಭುದೇವ ಮುಂಡಾಸದ, ಸದಾಶಿವ ಕೆಂಪಣ್ಣನವರ, ಜಗದೀಶ ಪಾಸ್ತೆ, ರಾಜು ತೆಗ್ಗಿನ, ನಾಗಪ್ಪ ಮಾಳಗಿ, ಸುರೇಶ ಪಾಟೀಲ, ಡಾ.ಸಂಜಯ ನಾಯಕ, ವಿಜಯಾನಂದ ಹುಬ್ಬಳ್ಳಿ, ಪ್ರೊ.ಮಹೇಶ್ವರಪ್ಪ ಸೂರಣಗಿ, ಎಚ್‌.ಎನ್‌.ದೇವಕುರಮಾರ, ಜಯಪ್ರಕಾಶ, ಕುಮಾರಸ್ವಾಮಿ, ಜಾಕೀರ, ಬಿ.ಪಿ.ಶಿಡೇನೂರ, ಸತೀಶ ಪಾಟೀಲ, ವಾಗೀಶ ನಂದಿಶೆಟ್ಟರ, ಶಂಕರ ಹುಡೇದ, ಮಾಲತೇಶ ಕುರುವತ್ತಿ, ಪಾಂಡಪ್ಪ ಕೊಪ್ಪದ, ಎಂ.ಶಶಿಧರ, ಸಂಜೀವ ಹೊನ್ನಾಳಿ, ಮಂಜುನಾಥ ಅಜ್ಜನವರನ, ಸುರೇಶ ಸೀಡ್ಸ್‌, ಮಂಗಳಾ ಮುದಗಲ್ಲ, ರೂಪಾ ಪಾಟೀಲ, ವನಜಾ ಗುರುರಾಜ, ಕವಿತಾ ತೆಗ್ಗಿನ, ಶೋಭಾ, ದಾನಮ್ಮ ಶೆಟ್ಟರ, ರೂಪಾ ಹೊನ್ನಾಳಿ, ರೂಪಾ ಪಾಟೀಲ, ಚೇತನಾ ಮುಂಡಾಸದ, ಕವಿತಾ, ಮಂಜುಳಾ ಎಂ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.