ADVERTISEMENT

ಜೈನ ಬಸದಿಗೆ ಸಹಾಯಧನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 15:37 IST
Last Updated 15 ನವೆಂಬರ್ 2024, 15:37 IST
ತಡಸ ಗ್ರಾಮದ ಶ್ರೀ ಶಾಂತಿನಾಥ ಜೈನ ದಿಗಂಬರ ಬಸದಿಗೆ ₹2ಲಕ್ಷದ ಡಿ.ಡಿ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾವೇರಿ ಜಿಲ್ಲೆಯ ನಿರ್ದೇಶಕ ಶಿವರಾಯ ಪ್ರಭು ವಿತರಣೆ ಮಾಡಿದರು
ತಡಸ ಗ್ರಾಮದ ಶ್ರೀ ಶಾಂತಿನಾಥ ಜೈನ ದಿಗಂಬರ ಬಸದಿಗೆ ₹2ಲಕ್ಷದ ಡಿ.ಡಿ ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾವೇರಿ ಜಿಲ್ಲೆಯ ನಿರ್ದೇಶಕ ಶಿವರಾಯ ಪ್ರಭು ವಿತರಣೆ ಮಾಡಿದರು   

ತಡಸ: ಗ್ರಾಮದ ಶ್ರೀ ಶಾಂತಿನಾಥ ಜೈನ ದಿಗಂಬರ ಬಸದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನೀಡಿದ ₹2 ಲಕ್ಷದ ಡಿ.ಡಿ ಅನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾವೇರಿ ಜಿಲ್ಲೆಯ ನಿರ್ದೇಶಕ ಶಿವರಾಯ ಪ್ರಭು ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಬಸದಿಗೆ ಪ್ರಸಾದ ರೂಪದಲ್ಲಿ ಈ ಸಹಾಯಧನ ನೀಡಲಾಗಿದ್ದು, ಇದನ್ನು ಸರಿಯಾದ ಉದ್ದೇಶಕ್ಕೆ ಬಳಸಿ ಹಾಗೂ ಹೆಚ್ಚಿನ ಸಹಾಯಧನ ನಿಮಗೆ ಬೇರೆಬೇರೆ ಕಡೆಯಿಂದ ಸಿಗಲಿ’ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕಿನ ಯೋಜನಾಧಿಕಾರಿ ಉಮಾ ನಾಗರಾಜ್ ಹಾಗೂ ಜೈನ ಕಮಿಟಿಯ ಅಧ್ಯಕ್ಷ ಈರಪ್ಪ ಗೊಟಗೋಡಿ, ಕಾರ್ಯದರ್ಶಿ ಸೂರಜ್ ಮನಕಟ್ಟಿ, ಪದಾಧಿಕಾರಿಗಳು, ವಲಯ ಮೇಲ್ವಿಚಾರಕರಾದ ಜಯರಾಮ ದೇವಾಡಿಗ, ಸೇವಾಪ್ರತಿನಿಧಿ ಪ್ರೇಮವ್ವ, ರಾಜ್ ಬಿ., ಶಾಹಿರಾಬಾನು ಹಾಗೂ ಒಕ್ಕೂಟ ಪದಾಧಿಕಾರಿಗಳು, ಸಂಘದ ಸದಸ್ಯರು, ಊರಿನ ಹಿರಿಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT