ಹಾವೇರಿ: ನಗರದ ನೇತಾಜಿ ನಗರದಲ್ಲಿ ಸಿಕ್ಕಿದ್ದ ಹ್ಯಾಂಡ್ ಗ್ರನೇಡ್ ಮಾದರಿಯ ಸ್ಫೋಟಕ ವಸ್ತುವನ್ನು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಶುಕ್ರವಾರ ನಗರದ ಹೊರವಲಯಕ್ಕೆ ಕೊಂಡೊಯ್ದು, ಸುರಕ್ಷತಾ ಕ್ರಮಗಳೊಂದಿಗೆ ಸ್ಫೋಟಿಸಿದರು. ಈ ಮೂಲಕ ನಗರದ ಜನತೆಯ ಆತಂಕ ನಿವಾರಣೆಯಾಯಿತು.
ನೇತಾಜಿ ನಗರದ ರವಿ ಮುಷ್ಠಿ ಅವರ 2 ಗುಂಟೆ ಖುಲ್ಲಾ ಜಾಗದಲ್ಲಿ ಮನೆ ಕಟ್ಟುವ ಸಲುವಾಗಿ ಸ್ವಚ್ಛತಾ ಕಾರ್ಯ ಮಾಡುವ ಸಂದರ್ಭ ಗುರುವಾರ ಅನುಮಾನಾಸ್ಪದ ಸ್ಫೋಟಕ ವಸ್ತು ಸಿಕ್ಕಿತ್ತು. ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
‘ಶುಕ್ರವಾರ ನಗರಕ್ಕೆ ಆಗಮಿಸಿದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಘಟನಾ ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಒಂದು ಹಂತದ ಶೋಧ ಕಾರ್ಯ ಮುಗಿದಿದ್ದು, ಇತರ ಯಾವುದೇ ಅಪಾಯಕಾರಿ ವಸ್ತುಗಳು ಸಿಕ್ಕಿಲ್ಲ. ಈ ಹ್ಯಾಂಡ್ ಗ್ರನೇಡ್ ಮಾದರಿ ಇಲ್ಲಿಗೆ ಬರಲು ಕಾರಣವೇನು? ಯಾವ ಉದ್ದೇಶಕ್ಕೆ ತರಲಾಗಿತ್ತು?ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಮಂತರಾಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.