ADVERTISEMENT

ರಾಣೆಬೆನ್ನೂರು: ಗುರು ಸ್ಮರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 16:20 IST
Last Updated 3 ಫೆಬ್ರುವರಿ 2024, 16:20 IST
ರಾಣೆಬೆನ್ನೂರಿನ ಲಯನ್ಸ್‌ ಶಾಲೆಯಲ್ಲಿ ಲಿಂ. ಶಿವಕುಮಾರ ಸ್ವಾಮೀಜಿ ಹಾಗೂ ವಿಜಯಪುರದ ಲಿಂ.ಸಿದ್ಧೇಶ್ವರ ಸ್ವಾಮೀಜಿ ಅವರ ಗುರು ಸ್ಮರಣೆ ಕಾರ್ಯಕ್ರಮ ನಡೆಸಲಾಯಿತು
ರಾಣೆಬೆನ್ನೂರಿನ ಲಯನ್ಸ್‌ ಶಾಲೆಯಲ್ಲಿ ಲಿಂ. ಶಿವಕುಮಾರ ಸ್ವಾಮೀಜಿ ಹಾಗೂ ವಿಜಯಪುರದ ಲಿಂ.ಸಿದ್ಧೇಶ್ವರ ಸ್ವಾಮೀಜಿ ಅವರ ಗುರು ಸ್ಮರಣೆ ಕಾರ್ಯಕ್ರಮ ನಡೆಸಲಾಯಿತು   

ರಾಣೆಬೆನ್ನೂರು: ಸಿದ್ಧಗಂಗಾ ಮಠದ ಲಿಂ. ಶಿವಕುಮಾರ ಸ್ವಾಮೀಜಿ ಅವರು ಅಕ್ಷರ, ಅನ್ನದಾನ ಮತ್ತು ಆಶ್ರಯ ಕಾಯಕ ಮಾಡಿದವರು. ಲಿಂ.ಸಿದ್ಧೇಶ್ವರ ಸ್ವಾಮೀಜಿ ಅವರು ತಮ್ಮ ಪ್ರವಚನದ ಮೂಲಕ ಸುಪ್ರಸಿದ್ದರಾಗಿದ್ದರು. ಇಬ್ಬರೂ ಪೂಜ್ಯರ ಹಿತನುಡಿಗಳು ನಮಗೆಲ್ಲರಿಗೂ ಆದರ್ಶ’ ಎಂದು ಎಂಜಿಎ ಸೊಸೈಟಿ ಅಧ್ಯಕ್ಷ ಮಲ್ಲೇಶಣ್ಣ ಅರಕೇರಿ ಹೇಳಿದರು.

ಇಲ್ಲಿನ ಮೇಡ್ಲೇರಿ ರಸ್ತೆಯ ಲಯನ್ಸ್‌ ಸ್ಕೂಲ್‌ ಆವರಣದ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಿದ್ಧಗಂಗಾಮಠದ ಲಿಂ.ಶಿವಕುಮಾರ ಸ್ವಾಮೀಜಿ ಹಾಗೂ ವಿಜಯಪುರದ ಲಿಂ.ಸಿದ್ಧೇಶ್ವರ ಸ್ವಾಮೀಜಿ ಅವರ ಗುರು ಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಪನ್ಯಾಸಕ ಎಸ್.ಬಿ. ಸಂಗಾಪುರ, ಲಯನ್ಸ್‌ ಸಂಸ್ಥೆ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಉಪನ್ಯಾಸ ನೀಡಿದರು.

ADVERTISEMENT

ಟಿ.ವೀರಣ್ಣ, ಎಲ್. ಜಿ. ಶೆಟ್ಟರ, ಟಿ.ಸಿ.ಪಾಟೀಲ, ಟಿ.ಕೆ.ಎಂ. ಬಸವರಾಜಯ್ಯ, ಕಿರಣಕುಮಾರ ಅಂತರವಳ್ಳಿ, ಗುತ್ತೆಪ್ಪ ಹಳೇಮನಿ, ಅಶೋಕ ಹೊಟ್ಟಿಗೌಡ್ರ, ಮಹೇಶ ಅಡಿವೆಪ್ಪನವರ, ಅಶೋಕ ಗಂಗನಗೌಡ್ರ, ಜಟ್ಟೆಪ್ಪ ಕರೇಗೌಡ್ರ, ಬಸವರಾಜ ಬಡಿಗೇರ, ಸಂಜಯ ನಾಯಕ, ಶಿವಪ್ಪ ಗುರಿಕಾರ, ಆರ್. ವಿ. ಸೂರಗೊಂಡ, ಎಂ. ಎಚ್. ಪಾಟೀಲ, ಜಿ.ಎಂ.ಬಿದರಿ ಅಮೋಘ ಬದಾಮಿ, ಪವನಕುಮಾರ ಮಲ್ಲಾಡದ, ಸಂದೀಪ ಹಲಗೇರಿ, ಕೊಟ್ರೇಶಪ್ಪ ಎಮ್ಮಿ ಇದ್ದರು. ನಂತರ ಅನ್ನಪ್ರಸಾದ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.