ADVERTISEMENT

ಹಾವೇರಿ:ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರ ಹುತಾತ್ಮ ದಿನ; ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 6:35 IST
Last Updated 10 ಜೂನ್ 2024, 6:35 IST
   

ಹಾವೇರಿ: ನಗರದಲ್ಲಿ 2008ರಲ್ಲಿ ನಡೆದಿದ್ದ ರೈತರ ಬೃಹತ್ ಹೋರಾಟದಲ್ಲಿ ಗೋಲಿಬಾ‌ರ್‌ನಲ್ಲಿ ಮೃತಪಟ್ಟಿದ್ದ ರೈತರಾದ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಅವರ ಹೆಸರಿನಲ್ಲಿ ಹುತಾತ್ಮ ದಿನ ಆಚರಿಸುತ್ತಿರುವ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಸಿದ್ದಪ್ಪ ವೃತ್ತದಲ್ಲಿರುವ ಸೇರಿರುವ ರೈತರು, ಇಬ್ಬರೂ ರೈತರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

'ರೈತರ ಸಮಸ್ಯೆಗಳನ್ನು ಆಲಿಸುವ ಕಿವಿ ಸರ್ಕಾರಕ್ಕೆ ಇಲ್ಲ. ಅಧಿಕಾರಿಗಳಿಗೂ ರೈತರ ಬಗ್ಗೆ ಕಾಳಜಿ‌ ಇಲ್ಲ. ರೈತರನ್ನು ಬೀದಿಗೆ ಬರುವಂತೆ ಮಾಡಿ, ಸರ್ಕಾರಗಳು ತಮಾಷೆ ನೋಡುತ್ತಿವೆ. ಇದರ ವಿರುದ್ಧ ನಮ್ಮ ಹೋರಾಟ ನಿರಂತರ' ಎಂದು ರೈತರು ಹೇಳಿದರು.

ADVERTISEMENT

'ರೈತರಿಗೆ ಬೀಜ ಹಾಗೂ ಗೊಬ್ಬರ ಸಿಗುತ್ತಿಲ್ಲ. ಗೋದಾಮಿನಲ್ಲಿ ಇದ್ದರೂ ಅಧಿಕಾರಿಗಳು ರೈತರಿಗೆ ಕೊಡುತ್ತಿಲ್ಲ. ಬೆಳೆ ವಿಮೆ ಸಹ ಸೂಕ್ತವಾಗಿ ರೈತರಿಗೆ ಸಿಗುತ್ತಿಲ್ಲ' ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.