ADVERTISEMENT

ವಕ್ಫ್ ಆಸ್ತಿ ಗಲಾಟೆ: ಕಡಕೋಳ ಗ್ರಾಮಕ್ಕೆ ಬಿಜೆಪಿ ನಿಯೋಗ ಭೇಟಿ

* ವಕ್ಫ್ ಆಸ್ತಿ ವಿಚಾರಕ್ಕೆ ಗಲಾಟೆ * ಕಡಕೋಳ ಗ್ರಾಮಕ್ಕೆ ಬಿಜೆಪಿ ನಿಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 15:43 IST
Last Updated 5 ನವೆಂಬರ್ 2024, 15:43 IST
ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮಕ್ಕೆ ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ಭೇಟಿ ನೀಡಿತು
ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮಕ್ಕೆ ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ಭೇಟಿ ನೀಡಿತು   

ಸವಣೂರು: ವಕ್ಫ್‌ ಆಸ್ತಿ ವಿಚಾರವಾಗಿ ಇತ್ತೀಚೆಗೆ ಗಲಾಟೆ ನಡೆದಿದ್ದ ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮಕ್ಕೆ ಸಂಸದ ಬಸವರಾಜ ಬೊಮಮಾಯಿ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ಭೇಟಿ ನೀಡಿತು.

ಗ್ರಾಮದಲ್ಲಿರುವ ನಿವಾಸಿಗಳು ಹಾಗೂ ಇತರರ ಮನೆಗಳಿಗೆ ಭೇಟಿ ನೀಡಿದ ನಿಯೋಗ, ಅವರ ಅಳಲು ಆಲಿಸಿತು.

ಬಸವರಾಜ ಬೊಮ್ಮಾಯಿ ಮಾತನಾಡಿ, ‘ಕಡಕೋಳ ಗ್ರಾಮವಷ್ಟೇ ಅಲ್ಲ, ರಾಜ್ಯದ ಯಾವುದೇ ರೈತರು ಹಾಗೂ ನಿವಾಸಿಗಳ ಜಾಗ ವಕ್ಫ್‌ ಆಸ್ತಿಯಾಗಲು ಬಿಡುವುದಿಲ್ಲ. ವಕ್ಫ್‌ ಮಂಡಳಿ ಹಾಗೂ ರಾಜ್ಯ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ರೈತರು ತಿರುಗಿ ಬಿದ್ದರೆ ಯಾವುದೇ ಸರ್ಕಾರ ಉಳಿಯುವುದಿಲ್ಲ ಎಂಬುದು ಇಂದಿನ ಸರ್ಕಾರಕ್ಕೆ ಅರ್ಥವಾಗಬೇಕು’ ಎಂದರು.

ADVERTISEMENT

‘ನಾನು ಈ ಕ್ಷೇತ್ರದ ಪ್ರತಿನಿಧಿ. ಒಂದಿಂಚು ಜಮೀನು ಕೂಡ ಅನ್ಯಾಯವಾಗಿ ವಕ್ಪ್ ಮಂಡಳಿಗೆ ಹೋಗದಂತೆ ನೋಡಿಕೊಳ್ಳುತ್ತೇನೆ‌. ನಿಮ್ಮನ್ನು ಯಾರೂ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ವಕ್ಪ್ ಅದಾಲತ್, ಸಚಿವ, ಜಿಲ್ಲಾಧಿಕಾರಿ ಏನೇ ಮಾಡಿದರೂ ಜಮೀನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿಯವರು ವಕ್ಪ್ ಕಾನೂನು ಸಂಪೂರ್ಣ ತಿದ್ದುಪಡಿ ಮಾಡಲು ತೀರ್ಮಾನ ಮಾಡಿದ್ದಾರೆ’ ಎಂದು ಹೇಳಿದರು.

‘ರೈತರ ಬಳಿ ನೂರಾರು ವರ್ಷದ ಜಮೀನು ಖರೀದಿ ದಾಖಲೆ ಇದೆ. ಅಷ್ಟಾದರೂ ರಾತ್ರೊರಾತ್ರಿ ಕಳ್ಳತನದಿಂದ ಖಾತೆ ಬದಲಾಯಿಸಲಾಗುತ್ತಿದೆ. ಈಗ, ಜನಶಕ್ತಿ ಮತ್ತು ಅಧಿಕಾರಶಾಹಿ ನಡುವೆ ಸಂಘರ್ಷ ನಡೆದಿದೆ. ಜನಶಕ್ತಿಯ ಮುಂದೆ ಯಾವ ಶಕ್ತಿಯೂ ನಿಲ್ಲುವುದಿಲ್ಲ’ ಎಂದರು.

ಮುಖಂಡ ಸಿ.ಟಿ. ರವಿ ಮಾತನಾಡಿ, ‘ಕಡಕೋಳ ಜನರು ಒಬ್ಬಂಟಿಯಲ್ಲ. ನಿಮ್ಮೊಂದಿಗೆ ನಾವಿದ್ದೇನೆ. ಜೀವಕ್ಕೆ ಜೀವ ಕೊಡಲು ಸಿದ್ದರಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.