ADVERTISEMENT

‘ಮಕ್ಕಳ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಸಹಕಾರಿ’

4ನೇ ವರ್ಷದ ಮಕ್ಕಳ ಹಬ್ಬ, ಮಕ್ಕಳ ಸಂತೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 16:22 IST
Last Updated 23 ನವೆಂಬರ್ 2024, 16:22 IST
ರಾಣೆಬೆನ್ನೂರಿನ ಮಾತಾ ಪಬ್ಲಿಕ್‌ ಸ್ಕೂಲಿನ ಸಭಾಂಗಣದಲ್ಲಿ ನಡೆದ 4ನೇ ಮಕ್ಕಳ ಹಬ್ಬ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮವನ್ನು ಡಯಟ್‌ ಉಪನ್ಯಾಸ ಎಂ.ಎಚ್‌.ಪಾಟೀಲ ಉದ್ಘಾಟಿಸಿದರು
ರಾಣೆಬೆನ್ನೂರಿನ ಮಾತಾ ಪಬ್ಲಿಕ್‌ ಸ್ಕೂಲಿನ ಸಭಾಂಗಣದಲ್ಲಿ ನಡೆದ 4ನೇ ಮಕ್ಕಳ ಹಬ್ಬ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮವನ್ನು ಡಯಟ್‌ ಉಪನ್ಯಾಸ ಎಂ.ಎಚ್‌.ಪಾಟೀಲ ಉದ್ಘಾಟಿಸಿದರು   

ರಾಣೆಬೆನ್ನೂರು: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡು ಕೂಡಾ ಪ್ರಾಮುಖ್ಯ ಹಾಗೂ ಪ್ರತಿಭೆ ಎನ್ನುವುದು ಈಗಾಗಲೇ ಮಕ್ಕ್ಕಳಲ್ಲಿ ಅಡಕವಾಗಿರುತ್ತದೆ ಅದನ್ನು ಹೊರತರುವ ಕೆಲಸ ಮಾತ್ರ ಶಿಕ್ಷಕರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು.

ಇಲ್ಲಿನ ಚೋಳ ಮರಡೇಶ್ವರ ನಗರ ಮಾತಾ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಈಚೆಗೆ ಮಾತಾ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಗೂ ಮಕ್ಕಳ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ 4ನೇ ಮಕ್ಕಳ ಹಬ್ಬ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಯಟ್‌ ಉಪನ್ಯಾಸಕ ಎಂ.ಎಚ್‌.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮಾತಾ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳು ಸಾಮೂಹಿಕ ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ADVERTISEMENT

ಹಿರೇಕೆರೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ.ಎನ್, ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷೆ ಜಯಶ್ರೀ ಮುಡೆವೆಪ್ಪನವರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವಿ.ಅಡಿವೇರ ಹಾಗೂ ಎಚ್‌.ಎಚ್. ಜಾಡರ, ಮುಖ್ಯಶಿಕ್ಷಕ ಚನ್ನಬಸಪ್ಪ, ಬಿ.ಎಚ್.ಮಡ್ಲೂರ, ಶಂಭುನಾಥ ಕೊಟ್ಟೂರ, ಮಂಜುನಾಥ ಗೌಡ್ರಶಿವಣ್ಣನವರ, ಅಶೋಕ ಪೂಜಾರಿ, ವಿಶ್ವನಾಥ ಕಮ್ಮಾರ ಮತ್ತು ಸದಸ್ಯರಾದ ಲತಾ ಸಿ.ಎಸ್, ಮಮತಾ ಆನ್ವೇರಿ, ಮಹಮ್ಮದ್‌ ರಫೀಕ್‌ ರಟ್ಟಿಹಳ್ಳಿ, ನಾಗರಾಜ್, ಗೀತಾ ಕಮ್ಮಾರ, ಪ್ರವೀಣಗೌಡ ಪಾಟೀಲ, ಶಹರಬಾನು ಹಾಜಿ, ಮಮತ.ಕೆ.ಎಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.