ADVERTISEMENT

ರಾಣೆಬೆನ್ನೂರು | 'ಮಹಿಳಾ ಕಾನೂನು ಪಾಲನೆಗೆ ಪೊಲೀಸ್‌ ಇಲಾಖೆ ಸದಾ ಸಿದ್ದ'

ದಕ್ಷ ಪೋಲಿಸ್ ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ, ಡಿವೈಎಸ್‌ ಗಿರೀಶ ಬೋಜಣ್ಣನವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:23 IST
Last Updated 23 ಜೂನ್ 2024, 15:23 IST
ರಾಣೆಬೆನ್ನೂರಿನ ಕಮಲಾನಗರದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಅನುಚಿತವಾಗಿ ವರ್ತಿಸುವ ಅಪರಾಧಿಗಳನ್ನು ಬಂಧಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದ ವಿದ್ಯಾರ್ಥಿ ಸ್ನೇಹಿ, ದಕ್ಷ ಪೋಲಿಸ್ ಅಧಿಕಾರಿಗಳಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಡಿವೈಎಸ್‌ ಗಿರೀಶ ಬೋಜಣ್ಣನವರ ಮಾತನಾಡಿದರು
ರಾಣೆಬೆನ್ನೂರಿನ ಕಮಲಾನಗರದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಅನುಚಿತವಾಗಿ ವರ್ತಿಸುವ ಅಪರಾಧಿಗಳನ್ನು ಬಂಧಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದ ವಿದ್ಯಾರ್ಥಿ ಸ್ನೇಹಿ, ದಕ್ಷ ಪೋಲಿಸ್ ಅಧಿಕಾರಿಗಳಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಡಿವೈಎಸ್‌ ಗಿರೀಶ ಬೋಜಣ್ಣನವರ ಮಾತನಾಡಿದರು   

ರಾಣೆಬೆನ್ನೂರು: ವಿದ್ಯಾರ್ಥಿನಿಯರು ಹೆಚ್ಚು ಜಾಗೃತರಾಗಬೇಕು. ಮಹಿಳಾ ಕಾನೂನುಗಳನ್ನು ಕಟ್ಟುನಿಟ್ಟಿನ ಪಾಲನೆಯಲ್ಲಿ ನಮ್ಮ ಇಲಾಖೆ ಸಾದಾ ಸಿದ್ಧವಾಗಿರುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಪೋಲಿಸ್ ಇಲಾಖೆಯ ಸಹಾಯದ ಸಂರಕ್ಷಣೆ ಪಡೆಯಬೇಕು ಎಂದು ಡಿವೈಎಸ್‌ ಗಿರೀಶ ಬೋಜಣ್ಣನವರ ಹೇಳಿದರು.

ಇಲ್ಲಿನ ಕಮಲ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಸಭಾಂಗಣದಲ್ಲಿ ಶನಿವಾರ ಎಸ್ಎಫ್‌ಐ ಹಾಸ್ಟೆಲ್ ಘಟಕದಿಂದ ಏರ್ಪಡಿಸಿದ್ದ ವಿದ್ಯಾರ್ಥಿ ಸ್ನೇಹಿ, ದಕ್ಷ ಪೋಲಿಸ್ ಅಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಇಲಾಖೆಯು ಅನೇಕ ಸಹಾಯವಾಣಿಗಳ ಮೂಲಕ ವಿದ್ಯಾರ್ಥಿ ಸ್ನೇಹಿ, ಸಾರ್ವಜನಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ಸಹಕರಿಸಬೇಕು. ತಮ್ಮ ಹಕ್ಕಿನ ಉಳಿವಿಗಾಗಿ ವಿದ್ಯಾರ್ಥಿಗಳು ಸಂಘಟಿತರಾಗಬೇಕು. ಕಾನೂನಾತ್ಮಕ ನ್ಯಾಯವನ್ನು ಪಡೆಯಬೇಕು ಎಂದರು.

ADVERTISEMENT

ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ವಸತಿ ವಿದ್ಯಾರ್ಥಿನಿಯರಿಗೆ ಅಸಭ್ಯ ವರ್ತನೆ ತೋರುವ ಘಟನೆ ಸಂಬಂಧಿಸಿದಂತೆ ನಗರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜಟಗಿ ಅವರು ವಿದ್ಯಾರ್ಥಿನಿಯರ ಜೊತೆಗೆ ಸಭೆ ಮಾಡಿ, ವಿದ್ಯಾರ್ಥಿನಿಯರಿಗೆ ಆದ ಅನ್ಯಾಯದ ವಿರುದ್ಧ ದೂರ ನೀಡಿದ 24 ಗಂಟೆಯಲ್ಲಿ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿದ ಪೋಲಿಸ್ ಇಲಾಖೆಯ ವಿದ್ಯಾರ್ಥಿ ಸ್ನೇಹಿ ಕಾರ್ಯ ಶ್ಲಾಘನೀಯ ಎಂದರು.

ನಗರದ ಹೊರವಲಯದಲ್ಲಿರುವ ಶಾಲಾ-ಕಾಲೇಜ್, ಹಾಸ್ಟೆಲ್‌ಗಳಿಗೆ ರಕ್ಷಣೆಯ ಅವಶ್ಯಕತೆ ಹೆಚ್ಚಾಗಿದ್ದು ಪೋಲಿಸ್ ಇಲಾಖೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಜೊತೆಗೆ ಸೂಕ್ತ ಸಂರಕ್ಷಣೆ ನೀಡಬೇಕು. ವಿದ್ಯಾರ್ಥಿ ಸ್ನೇಹಿ, ಮಹಿಳಾ ಸ್ನೇಹಿ, ವರುಣಪಡೆ ಸೇರಿದಂತೆ ವಿವಿಧ ರೀತಿಯ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದರು.

ನಗರ ಠಾಣೆ ಪಿಎಸ್‌ಐ ಗಡ್ಡೆಪ್ಪ ಮಲ್ಲಪ್ಪ ಗುಂಜಟಗಿ, ಎಎಸ್ಐ ಎಸ್.ಎಸ್.ಕಬ್ಬಿಣಕಂತಿಮಠ, ಆರ್.ಎಸ್ ನಾಡಗೌಡದೇಸಾಯಿ, ಎನ್.ಆರ್.ಕಲಾದಗಿ, ಸಿ.ಬಿ .ಕಂಬಳಿ, ರಮೇಶ ಕುಸಗೂರ, ನಾಗರಾಜ ಬೆನಕಜ್ಜಿ, ಶ್ರೀಕಾಂತ ಕೊರಗರ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.

ವಸತಿ ನಿಲಯ ಮೇಲ್ವಿಚಾರಕಿ ಯಶೋದಾ ಆಂತರವಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಎಸ್ಎಫ್ಐ ಎಸ್‌ಎಫ್‌ ಐ ಮುಖಂಡ ಗೌತಮ ಸಾವಕ್ಕಳವರ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಧರ ಸಿ, ಪವಿತ್ರಾ ಗಡ್ಡದ, ಅಪೂರ್ವ, ಎಸ್ಎಫ್ಐ ತಾಲ್ಲೂಕು ಉಪಾಧ್ಯಕ್ಷ ನೇಹಾಲ್‌, ಗೌತಮ್ ಸಾವಕ್ಕನವರ, ಬಸವರಾಜ ಕೊಣಸಾಲಿ, ರಾಧಿಕಾ ಹೊನ್ನಪ್ಪನವರ, ಕಾವ್ಯಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.