ADVERTISEMENT

ಶಿಗ್ಗಾವಿ-ಕುಂದಗೋಳ ತಂಡದಿಂದ ಅಯೋಧ್ಯೆಯಲ್ಲಿ ‘ಶ್ರೀರಾಮಚಂದ್ರ’ ದೊಡ್ಡಾಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 15:10 IST
Last Updated 17 ಜನವರಿ 2024, 15:10 IST
<div class="paragraphs"><p>ಶಿಗ್ಗಾವಿ ಹಾಗೂ ಕುಂದಗೋಳ ದೊಡ್ಡಾಟ ತಂಡದವರಿಂದ ‘ಶ್ರೀರಾಮಚಂದ್ರ’ ದೊಡ್ಡಾಟ ಪ್ರದರ್ಶನ&nbsp;(ಸಂಗ್ರಹ&nbsp;ಚಿತ್ರ</p></div>

ಶಿಗ್ಗಾವಿ ಹಾಗೂ ಕುಂದಗೋಳ ದೊಡ್ಡಾಟ ತಂಡದವರಿಂದ ‘ಶ್ರೀರಾಮಚಂದ್ರ’ ದೊಡ್ಡಾಟ ಪ್ರದರ್ಶನ (ಸಂಗ್ರಹ ಚಿತ್ರ

   

ಶಿಗ್ಗಾವಿ (ಹಾವೇರಿ ಜಿಲ್ಲೆ): ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಶಿಗ್ಗಾವಿ, ಕುಂದಗೋಳ ಹಾಗೂ ಹಳಿಯಾಳದ ಕಲಾವಿದರ ತಂಡದಿಂದ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನ ನಡೆಯಲಿದೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಮಹಾರಾಷ್ಟ್ರ ರಾಜ್ಯದ ನಾಗಪುರದ ದಕ್ಷಿಣ ಮಧ್ಯ ಕ್ಷೇತ್ರದ ಸಾಂಸ್ಕೃತಿಕ ಕೇಂದ್ರದಿಂದ ಆಮಂತ್ರಣ ಪತ್ರ ಬಂದಿದೆ. 

ADVERTISEMENT

ಶಿಗ್ಗಾವಿ ಪಟ್ಟಣದ ರಾಮಚಂದ್ರಪ್ಪ ಅರ್ಕಸಾಲಿ ನೇಪಥ್ಯ ಕಲಾಸಂಸ್ಥೆಯ ಕಲಾವಿದ ಶಂಕರ ಅರ್ಕಸಾಲಿ, ಸಹಾಯಕ ಕಲಾವಿದ ಶರಣ ಬಿಂದಲಗಿ, ದೊಡ್ಡಾಟದ ಪಾತ್ರಧಾರಿಗಳಿಗೆ ಪ್ರಸಾಧನ ವೇಷಭೂಷಣ ಸೇವೆ ಸಲ್ಲಿಸಲಿದ್ದಾರೆ.

ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ಕಲಾವಿದರಾದ ಚಂದ್ರಶೇಖರಯ್ಯ ಗುರಯ್ಯನವರ ಕಲಾ ತಂಡದಿಂದ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನವಾಗಲಿದೆ. ಅದರಲ್ಲಿ 10 ಪಾತ್ರಧಾರಿಗಳು, ಐವರು ಸಂಗೀತ ಕಲಾವಿದರು ಹಿನ್ನೆಲೆ ಸಂಗೀತ ನೀಡಲಿದ್ದಾರೆ.

ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ಜ.26ರಿಂದ 29ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ ಒಂದು ಗಂಟೆ ದೊಡ್ಡಾಟ ಪ್ರದರ್ಶನಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಳಿಯಾಳದ ತೊಗಲುಗೊಂಬೆ ಆಟದ ಕಲಾವಿದ ಸಿದ್ದು ಬಿರಾದಾರ ಅದರ ನೇತೃತ್ವ ವಹಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೊಡ್ಡಾಟ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವುದು ನಮ್ಮೆಲ್ಲ ಕಲಾವಿದರ ಪುಣ್ಯ. 30 ವರ್ಷಗಳಿಂದ ಮಾಡಿದ ಕಲಾ ಸೇವೆ ಸಾರ್ಥಕ ಎನ್ನಿಸುತ್ತಿದೆ
– ಶಂಕರ ಅರ್ಕಸಾಲಿ, ಕಲಾವಿದ, ಶಿಗ್ಗಾವಿ ರಾಮಚಂದ್ರಪ್ಪ ಅರ್ಕಸಾಲಿ ನೇಪಥ್ಯ ಕಲಾಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.