ADVERTISEMENT

ದಶರಥಕೊಪ್ಪ: 196 ಮಂದಿ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:19 IST
Last Updated 26 ಅಕ್ಟೋಬರ್ 2024, 16:19 IST
ಹಾನಗಲ್ ತಾಲ್ಲೂಕಿನ ದಶರಥಕೊಪ್ಪ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರದಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು 
ಹಾನಗಲ್ ತಾಲ್ಲೂಕಿನ ದಶರಥಕೊಪ್ಪ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರದಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು    

ಹಾನಗಲ್: ಇಲ್ಲಿನ ಲೊಯೋಲ ವಿಕಾಸ ಕೇಂದ್ರದಿಂದ ತಾಲ್ಲೂಕಿನ ದಶರಥಕೊಪ್ಪ ಗ್ರಾಮದ ಶಾಲಾ ಆವರಣದಲ್ಲಿ ಶುಕ್ರವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಅಗತ್ಯ  ಔಷಧಿಯನ್ನು ಉಚಿತವಾಗಿ ವಿತರಿಸಲಾಯಿತು.

ಹಾನಗಲ್ ವೀರಾಪೂರ ಮಾಳೋದೆ ಹಾಸ್ಪಿಟಲ್ ಮತ್ತು ಸಭಾ ಮೆಡಿಕಲ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಮೂಳೆಗಳ ಪರೀಕ್ಷೆ ಮತ್ತಿತರ ತಪಾಸಣೆ ಕೈಗೊಳ್ಳಲಾಯಿತು. ದಶರಥಕೊಪ್ಪ ಮತ್ತು ಸುತ್ತಲಿನ ಗ್ರಾಮದ 196 ಜನರು ಆರೋಗ್ಯ ತಪಾಸಣೆಗೆ ಒಳಗಾದರು.

ಲೊಯೋಲಾ ವಿಕಾಸ ಕೇಂದ್ರದ ಸಹ ನಿರ್ದೇಶಕ ಫಾ.ವಿನ್ಸೆಂಟ್ ಜೇಸನ್ ಶಿಬಿರಕ್ಕೆ ಚಾಲನೆ ನೀಡಿ, ‘ನಿತ್ಯದ ಕೆಲಸಗಳ ಒತ್ತಡದಲ್ಲಿ ಆರೋಗ್ಯದತ್ತ ಗಮನ ಹರಿಸಲಾಗುತ್ತಿಲ್ಲ. ಇದು ಒಳ್ಳೆಯ ನಡೆ ಅಲ್ಲ. ಪೌಷ್ಟಿಕ ಆಹಾರ ಸೇವನೆ ಮತ್ತು ಆಗಾಗ್ಗೆ ಆರೋಗ್ಯ ತಪಾಸಣೆಗೆ ಗ್ರಾಮೀಣರು ಮುಂದಾಗಬೇಕು’ ಎಂದರು.

ADVERTISEMENT

ಎಲುವು, ಮೂಳೆ ಕೀಲು ಶಸ್ತ್ರ ಚಿಕಿತ್ಸಕ ಡಾ.ನೂತನ ಪಳವಳ್ಳಿ, ಡಾ.ರೋಜಾ ಘಾಳಪೂಜಿ ಡಾ.ಪರಹಾನಾಬಾನು ಸುಲ್ತಾನಪುರ ಮತ್ತು ವೀರಾಪೂರ ಮಾಳೋದೆ ಹಾಸ್ಪಿಟಲ್‌ನ ಮುಜಾಹಿದ್ ಕಿಲ್ಲೇದಾರ್ ಹಾಗೂ ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ಪೀರಪ್ಪ ಸಿರ್ಸಿ, ಫಕ್ಕೀರೇಶ ಗೌಡಳ್ಳಿ, ಲೋಹಿತ ಕಾಟಣ್ಣವರ, ಸಾವಿತ್ರಿ ಕನ್ನನಾಯಕನವರ, ಮಂಜುಳಾ ನಾಗೋಜಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.