ADVERTISEMENT

ಹಾವೇರಿ ಜಿಲ್ಲೆಯ ವಿವಿಧೆಡೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 11 ಮೇ 2024, 16:05 IST
Last Updated 11 ಮೇ 2024, 16:05 IST
ಹಾವೇರಿ ನಗರದಲ್ಲಿ ಶನಿವಾರ ಸಂಜೆ ಅರ್ಧ ತಾಸು ಸುರಿಯಿತು
ಹಾವೇರಿ ನಗರದಲ್ಲಿ ಶನಿವಾರ ಸಂಜೆ ಅರ್ಧ ತಾಸು ಸುರಿಯಿತು   

ಹಾವೇರಿ: ಜಿಲ್ಲೆಯ ವಿವಿಧೆಡೆ ಶನಿವಾರ ಮಳೆಯಾಗಿದ್ದು, ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಮಳೆಯು ತಂಪೆರೆದಿದೆ.

ಹಾವೇರಿ ನಗರದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಅರ್ಧ ತಾಸು ಸುರಿದಿದೆ. ಗುಡುಗು, ಮಿಂಚು ಸಹಿತವಾಗಿ ಮಳೆಯಾಗಿದ್ದು, ಕೆಲ ಸಮಯ ವಿದ್ಯುತ್‌ ವ್ಯತ್ಯಯವಾಗಿದೆ.

ಹಿರೇಕೆರೂರು, ಶಿಗ್ಗಾಂವಿ, ಬ್ಯಾಡಗಿ, ಹಾನಗಲ್ಲ ತಾಲ್ಲೂಕಿನಲ್ಲೂ ಗಾಳಿ, ಗುಡುಗು ಸಹಿತವಾಗಿ ಸಾಧಾರಣ ಮಳೆಯಾಗಿದೆ. ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪು ನೀಡಿದೆ. ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ಭಾರಿ ಏರಿಕೆ ಕಂಡಿದ್ದರಿಂದ ಸೆಕೆ ತಾಳಲಾರದೇ ಜನತೆ ಕಂಗೆಟ್ಟಿದ್ದರು. ಕೆಲವು ಭಾಗಗಳಲ್ಲಿ ಮಳೆಯಾಗದಿದ್ದರೂ ತಂಪನೆಯ ವಾತಾವರಣ ಉಂಟಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.