ADVERTISEMENT

ಹೋರಿ ಹಬ್ಬ: ನಾಲ್ವರು ಆಯೋಜಕರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 0:39 IST
Last Updated 9 ಮಾರ್ಚ್ 2024, 0:39 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಹಂಸಬಾವಿ: ಗ್ರಾಮದ ಕೊಳ್ಳೇರ ಕಟ್ಟೆಕೆರೆಯಲ್ಲಿ ಮಾರ್ಚ್‌ 4ರಂದು ನಡೆದಿದ್ದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜಕರಾದ ಹಂಸಬಾವಿಯ ಹನುಮಂತ ರಾಮಪ್ಪ ಈಳಗೇರ, ಸೋಮಶೇಖರ ಶಿವಾನಂದಪ್ಪ ಹುಚಗೊಂಡರ, ಶಫಿವುಲ್ಲಾ ಸೈಯದಾಹ್ಮದ್‌ ಮುಲ್ಲಾ ಮತ್ತು ದೀವಿಗಿಹಳ್ಳಿಯ ಶ್ರೀಕಾಂತ ಹನುಮಗೌಡ ನಾಗಪ್ಪನವರ ಎಂಬುವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

‘ಸ್ಪರ್ಧೆ ಆಯೋಜನೆಗೆ ಅನುಮತಿ ಪಡೆದಿರಲಿಲ್ಲ. ಸ್ಪರ್ಧೆ ವೇಳೆ ಇಬ್ಬರು ಗಾಯಗೊಂಡು ಮೃತಪಟ್ಟಿದ್ದು, ಇನ್ನೂ ಹಲವರು ಗಾಯಗೊಂಡಿದ್ದರು. ಮೃತರ ಸಂಬಂಧಿಕರ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಹೋರಿ ಹಬ್ಬ ಆಯೋಜಕರು ಮುಂಜಾಗ್ರತೆ ಕೈಗೊಳ್ಳಲ್ಲ ಮತ್ತು ಸಂಬಂಧಿಸಿ ಇಲಾಖೆಯಿಂದ ಅನುಮತಿ ಪಡೆಯಲ್ಲ. ನಿಯಮಬಾಹಿರವಾಗಿ ನಡೆಸುವ ಹೋರಿ ಹಬ್ಬ ಅಪಾಯಕಾರಿಯಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.