ADVERTISEMENT

ಪ್ರಧಾನಿಗೆ ನಿಂದನೆ: ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 14:18 IST
Last Updated 24 ಜನವರಿ 2024, 14:18 IST
ಸಾಧಿಕ ದಾಲ್‌ರೊಟ್ಟಿ
ಸಾಧಿಕ ದಾಲ್‌ರೊಟ್ಟಿ   

ರಾಣೆಬೆನ್ನೂರು (ಹಾವೇರಿ ಜಿಲ್ಲೆ) ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ಸಂದೇಶ ಹಂಚಿಕೊಂಡ ಆರೋಪದ ಮೇರೆಗೆ ತಾಲ್ಲೂಕಿನ ಹೆಡಿಯಾಲ ಗ್ರಾಮದ ಯುವಕ ಸಾದಿಕ್‌ ದಾಲ್‌ ರೊಟ್ಟಿ ಅಲಿಯಾಸ್‌ ಹರಪನಹಳ್ಳಿ ಎಂಬುವವನ್ನು ಪೊಲೀಸರು ಬಂಧಿಸಿದ್ದಾರೆ. 

‘ಶ್ರೀರಾಮಮಂದಿರದ ಚಿತ್ರದ ಮೇಲೆ ಅಲ್ಲಾ ಹೋ ಅಕ್ಬರ್‌ ಎಂದು ತನ್ನ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿಕೊಂಡು, ಒಂದು ಸಮುದಾಯದ ಭಾವನೆಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಅವಹೇಳನಕಾರಿ ಬರಹಗಳನ್ನು ಹಾಕಿದ ಬಗ್ಗೆ ದೂರು ಕೂಡ ಸಲ್ಲಿಕೆಯಾಗಿದೆ’ ಎಂದು ಹಲಗೇರಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸವಣೂರಿನ ಯುವಕ ಬಂಧನ:

ADVERTISEMENT

ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ಸಂದೇಶ ಹಂಚಿಕೊಂಡ ಸವಣೂರು ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮದ ಯುವಕ ಖಲಂದರ್‌ ಕಣವಿ ವಿರುದ್ಧ ಪ್ರಕರಣ ದಾಖಲಾಗಿದೆ. 

‘ಆರೋಪಿ ಖಲಂದರ್‌ ಕಣವಿ ತನ್ನ ವೈಯಕ್ತಿಕ ವಾಟ್ಸ್ಆ್ಯಪ್‌ ಸ್ಟೇಟಸ್‌ನಲ್ಲಿ ರಾಮ ಮಂದಿರಕ್ಕಿಂತ ದೊಡ್ಡ ಮಸೀದಿಯನ್ನು ನಾವು ನಿರ್ಮಾಣ ಮಾಡುತ್ತೇವೆ ಎಂಬರ್ಥದಲ್ಲಿ ವಿಡಿಯೊ ದೃಶ್ಯಾವಳಿಗಳನ್ನು ಹಾಕಿದ್ದ. ಪಾಕಿಸ್ತಾನದ ರಾಷ್ಟ್ರಧ್ವಜದ ಚಿತ್ರವಿಟ್ಟು, ಕೋಮು ಪ್ರಚೋದನೆಯನ್ನು ಹೆಚ್ಚಿಸುವ ಸ್ಟೇಟಸ್‌ ಹಾಕಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಖಲಂದರ್‌ ಕಣವಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.