ಹಾನಗಲ್: ತಾಲ್ಲೂಕಿನ ಬೀರಲಿಂಗೇಶ್ವರ ಜನಪದ ಕಲಿಕಾ ವಿದ್ಯಾ ಸಂಸ್ಥೆ ಅಡಿಯಲ್ಲಿ ವಿವಿಧ ಕಲಾ ಪ್ರಕಾರಗಳ ಕಲಾವಿದರು ವಿವಿಧ ಬೇಡಿಕೆ ಈಡೇರಿಸುವಂತೆ ಸೋಮವಾರ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಕಲಾವಿದರು ಮಾಶಾಸನ ಪಡೆಯಲು ಇರುವ 58 ವರ್ಷ ವಯೋಮಿತಿ ತೆಗೆದುಹಾಕಿ, ಈ ವಯೋಮಿತಿಯನ್ನು 50ಕ್ಕೆ ಇಳಿಸಬೇಕು. ಅಂಗವಿಕಲ ಕಲಾವಿದರು ಮಾಶಾಸನ ಪಡೆಯಲು ಅವರ ವಯೋಮಿತಿ 35ಕ್ಕೆ ನಿಗದಿ ಮಾಡಬೇಕು. ಈಗ ನೀಡುತ್ತಿರುವ ₹2 ಸಾವಿರ ಮಾಶಾಸನದ ಮಿತಿಯನ್ನು ಹೆಚ್ಚಿಸಿ ₹5 ಸಾವಿರ ಮಾಡಬೇಕು. ಬಡ ಕಲಾವಿದರು ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ನೀಡಬೇಕು. ತಾಲ್ಲೂಕಿಗೆ ಒಂದು ಕಲಾ ಭವನ ನಿರ್ಮಾಣ ಮಾಡಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.
ತಾಲ್ಲೂಕಿನ ಕಲಾವಿದರಾದ ಬಡವೆಪ್ಪ ಆನವಟ್ಟಿ, ಮಧುಕುಮಾರ ಹರಿಜನ, ರಾಮಣ್ಣ ಶಿವಣ್ಣನವರ, ಗುಡ್ಡಪ್ಪ ದಡ್ಡಿಕೊಪ್ಪ, ಹನುಮಂತಪ್ಪ, ಮಾರುತಿ ಹಳ್ಳದ, ಮಂಜುನಾಥ ಈಳಿಗೇರ, ಕರಬಸಪ್ಪ ಬೆಂಡಿಗೇರಿ, ಗುಡ್ಡಪ್ಪ ಬಂಗೇರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.