ADVERTISEMENT

ಶಿಗ್ಗಾವಿ ಉ‍ಪಚುನಾವಣೆ | ಬಿಜೆಪಿ ಬ್ಯಾನರ್‌ಗೆ ಕೆಆರ್‌ಎಸ್ ವಿರೋಧ: ಜಟಾಪಟಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 7:13 IST
Last Updated 25 ಅಕ್ಟೋಬರ್ 2024, 7:13 IST
<div class="paragraphs"><p>ಶಿಗ್ಗಾವಿ ನಗರದ ರಾಣಿ ಚನ್ನಮ್ಮ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ವೃತ್ತವರೆಗೆ ಬ್ಯಾನರ್ ಹಾಗೂ ಕೇಸರಿ ಬಾವುಟ ಕಟ್ಟಲಾಗಿದೆ.</p></div>

ಶಿಗ್ಗಾವಿ ನಗರದ ರಾಣಿ ಚನ್ನಮ್ಮ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ವೃತ್ತವರೆಗೆ ಬ್ಯಾನರ್ ಹಾಗೂ ಕೇಸರಿ ಬಾವುಟ ಕಟ್ಟಲಾಗಿದೆ.

   

ಹಾವೇರಿ: ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಚುನಾವಣೆಗೆ ಕಾವು ಹೆಚ್ಚಾಗುತ್ತಿದೆ. ಬ್ಯಾನರ್ ವಿಚಾರವಾಗಿ ಬಿಜೆಪಿ ಹಾಗೂ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ನಡುವೆ ಶುಕ್ರವಾರ ಜಟಾಪಟಿ ನಡೆಯಿತು.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಶುಕ್ರವಾರ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕಾಗಿ ರಾಣಿ ಚನ್ನಮ್ಮ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ವೃತ್ತವರೆಗೆ ಬ್ಯಾನರ್ ಹಾಗೂ ಕೇಸರಿ ಬಾವುಟ ಕಟ್ಟಲಾಗಿದೆ. ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಕಟೌಟ್‌ಗಳನ್ನೂ ನಿಲ್ಲಿಸಲಾಗಿದೆ.

ADVERTISEMENT

'ಬಿಜೆಪಿಯವರು ಚುನಾವಣಾ ಆಯೋಗದ ಅನುಮತಿ ಪಡೆಯದೇ ಅಕ್ರಮವಾಗಿ ಬ್ಯಾನರ್ ಹಾಗೂ ಕಟೌಟ್ ಕಟ್ಟಿದ್ದಾರೆ' ಎಂದು ಆರೋಪಿಸಿದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು, ಚನ್ನಮ್ಮ ವೃತ್ತದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಬ್ಯಾನರ್ ಹಾಗೂ ಕಟೌಟ್ ತೆರವುಗೊಳಿಸುವಂತೆ ಒತ್ತಾಯಿಸಿದರು. ಕ್ರಮಕೈಗೊಳ್ಳದ ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೃತ್ತದಲ್ಲಿ ಸೇರಿದ್ದ ಬಿಜೆಪಿ‌ ಕಾರ್ಯಕರ್ತರು, ಕೆಆರ್‌ಎಸ್ ಕಾರ್ಯಕರ್ತರ ಜೊತೆ ಮಾತಿನ ಚಕಮಕಿ ನಡೆಸಿದರು. ಇದರಿಂದಾಗಿ ಸ್ಥಳದಲ್ಲಿ ವಾಗ್ವಾದ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದರು.

'ಪುರಸಭೆ ಹಾಗೂ ಸ್ಥಳೀಯ ಅಧಿಕಾರಿಗಳು, ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಅಕ್ರಮವಾಗಿ ಬ್ಯಾನರ್ ಹಾಗೂ ಕಟೌಟ್ ಕಟ್ಟಿದರೂ ಅಧಿಕಾರಿಗಳು‌ ಮೌನವಾಗಿದ್ದಾರೆ. ಬ್ಯಾನರ್ ಹಾಗೂ ಕಟೌಟ್ ತೆರವು ಮಾಡಬೇಕು' ಎಂದು ಒತ್ತಾಯಿಸಿದರು.

ಪುರಸಭೆ ಅಧಿಕಾರಿಗಳನ್ನು ಕೆಆರ್‌ಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.