ADVERTISEMENT

ರಾಣೆಬೆನ್ನೂರು: ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವ

‘ವ್ಯಾದಿ ಬೂದಿ ಆದೀತಲೆ, ಸೃಷ್ಟಿ ಸಿರಿ ಆದೀತಲೆ ಪರಾಕ್‌’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 15:54 IST
Last Updated 24 ಅಕ್ಟೋಬರ್ 2020, 15:54 IST
ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ವಿಜಯದಶಮಿ ಅಂಗವಾಗಿ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ಬಿಲ್ಲನ್ನು ಏರಿ ಕಾರ್ಣಿಕ ನುಡಿದರು
ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ವಿಜಯದಶಮಿ ಅಂಗವಾಗಿ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ಬಿಲ್ಲನ್ನು ಏರಿ ಕಾರ್ಣಿಕ ನುಡಿದರು   

ರಾಣೆಬೆನ್ನೂರು: ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ವಿಜಯದಶಮಿ ಅಂಗವಾಗಿ ಶನಿವಾರ ಮಾಲತೇಶ ದೇವರ ಕಾರ್ಣಿಕೋತ್ಸವ ನಡೆಯಿತು.

ಕಾರ್ಣಿಕ ಗೊರವಯ್ಯನಾಗಪ್ಪಜ್ಜ ಉರ್ಮಿ ಅವರು ಬಿಲ್ಲನ್ನು ಏರಿ ಆಕಾಶದತ್ತ ಮುಖ ಮಾಡಿ, ‘ವ್ಯಾದಿ ಬೂದಿ ಆದೀತಲೆ, ಸೃಷ್ಟಿ ಸಿರಿ ಆದೀತಲೆ ಪರಾಕ್’‌ ಎಂದು ಭವಿಷ್ಯ ನುಡಿದರು.

‘ವ್ಯಾಧಿಎಂದರೆ ಸಾಂಕ್ರಾಮಿಕ ರೋಗವಾದ ಕೊರೊನಾ ಸೋಂಕು ಸೇರಿದಂತೆ ರೋಗ ರುಜಿನಗಳು ಬೂದಿಯಾಗಲಿವೆ. ಸೃಷ್ಟಿ ಸಿರಿಯಾದೀತಲೆ ಎಂದರೆ ಲೋಕ, ಭೂಮಿ, ಪರಿಸರ, ರಾಜ್ಯ, ರಾಷ್ಟ್ರ ಆರ್ಥಿಕವಾಗಿ ಸಂಪದ್ಭರಿತವಾಗಲಿದೆ ಎಂದರ್ಥ’ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಚ್‌. ಮುಕ್ಕಣ್ಣನವರ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.