ಕುಮಾರಪಟ್ಟಣ: ‘ರಾಜಕಾರಣಿಗಳು ಸ್ವಾರ್ಥ ಸಾಧನೆಗಾಗಿ ಜಾತಿ ವ್ಯವಸ್ಥೆಗೆ ಕಾರಣಕರ್ತರಾದರೆ ಸ್ವಾಮೀಜಿಗಳು ಜಾತಿ ತೊಲಗಿಸಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಮಠ ಮಂದಿರಗಳು ಉತ್ತಮ ಸಮಾಜದ ನಿರ್ಮಾಣ ಮಾಡಲು ಶ್ರಮಿಸುತ್ತಿವೆ. ಭಾರತ ಮಾತೆಯ ಮಡಿಲಿನ ಮಮತೆಯನ್ನು ಅರಿತವರು ಭಾರತವಲ್ಲದೆ ವಿಶ್ವಕ್ಕೆ ಮಾದರಿ ಆಗುತ್ತಾರೆ’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಮೀಪದ ಕೊಡಿಯಾಲ ಗ್ರಾಮದ ಪುಣ್ಯಕೋಟಿ ಮಠದ ಆವರಣದಲ್ಲಿ ಗುರುವಾರ ನೂತನ ತಪೋಮಂದಿರದ ಮೇಲ್ಬಾಗದಲ್ಲಿ ರಂಭಾಪುರಿ ಪೀಠದ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಭಗವತ್ಪಾದರ 36 ಅಡಿ ಎತ್ತರದ ಮಹಾಮೂರ್ತಿ ಹಾಗೂ ₹ 1.13 ಕೋಟಿ ವೆಚ್ಚದ ತಡಗೋಡೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭ ಅಂಗವಾಗಿ ಏರ್ಪಡಿಸಲಾಗಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ವಿಮಲ ರೇಣುಕ ವೀರಮುಕ್ತಿಮನಿ ಸ್ವಾಮೀಜಿ, ನೆಗಳೂರು ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಗುರುಶಾಂತಲಿಂಗ ಸ್ವಾಮೀಜಿ, ಕಡೇನಂದೀಹಳ್ಳಿ ರೇವಣಸಿದ್ದೇಶ್ವರ ಪುಣ್ಯಾಶ್ರಮದ ರೇವಣಸಿದ್ದೇಶ್ವರ ಸ್ವಾಮೀಜಿ, ನೂಲಿ ಚಂದಯ್ಯ ಗುರು ಪೀಠದ ವೃಷಭೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಕುಲಸಚಿವ ಡಾ.ಎಚ್.ವಿಶ್ವನಾಥ್, ಕರ್ನಾಟಕ ರಾಜ್ಯ ಎಸ್ಎಸ್ ಸಮಾಜದ ರಾಜ್ಯಾಧ್ಯಕ್ಷ ಡಾ.ಶಶಿಕುಮಾರ ಮೆಹರವಾಡೆ ಮಾತನಾಡಿದರು.
ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು. ಕೊಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಂಜುನಾಥ ಶಿವಮೊಗ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ವಾಣಿ ಬಕ್ಕೇಶ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ನರಸಗೊಂಡರ, ಸಿದ್ಧು ಚಿಕ್ಕಬಿದರಿ, ಗಿರೀಶ ಹೆಗ್ಗಪ್ಪನವರ, ಚೋಳಪ್ಪ ಕಸವಾಳ, ರವೀಂದ್ರಗೌಡ ಪಾಟೀಲ, ದುಂಡೆಪ್ಪ ಹೆಗ್ಗಪ್ಪನವರ, ಶಿಲ್ಪಿ ಜೀವನಕುಮಾರ್, ಕುಮಾರ ಜಿ.ಆರ್., ಬಕ್ಕೇಶ, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಮಂಜುನಾಥ, ಜಿ.ಎಂ.ಚಿಕ್ಕಮಠ, ರೂಪಾ, ಕರಿಯಪ್ಪ ಮಾಳಿಗೇರ, ಬಸವಣ್ಣೆಪ್ಪ ಹೆಗ್ಗಪ್ಪನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.