ADVERTISEMENT

ಬೇಡಿಕೆ ಈಡೇರಿಕೆಗೆ ಎಲ್‌ಐಸಿ ಏಜೆಂಟರ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 16:10 IST
Last Updated 1 ಸೆಪ್ಟೆಂಬರ್ 2022, 16:10 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಹಾವೇರಿ ನಗರದ ಎಲ್‍ಐಸಿ ಕಚೇರಿ ಎದುರು ಜಿಲ್ಲಾ ಲಿಯಾಫಿ ಪದಾಧಿಕಾರಿಗಳು ಹಾಗೂ ಏಜೆಂಟರು ಗುರುವಾರ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಹಾವೇರಿ ನಗರದ ಎಲ್‍ಐಸಿ ಕಚೇರಿ ಎದುರು ಜಿಲ್ಲಾ ಲಿಯಾಫಿ ಪದಾಧಿಕಾರಿಗಳು ಹಾಗೂ ಏಜೆಂಟರು ಗುರುವಾರ ಪ್ರತಿಭಟನೆ ನಡೆಸಿದರು   

ಹಾವೇರಿ: ಪಾಲಿಸಿದಾರರ ಮತ್ತು ಏಜೆಂಟ್‍ಗಳಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಫೆಡರೇಷನ್‌ನ (ಲಿಯಾಫಿ) ಸೂಚನೆಯಂತೆ ನಗರದ ಎಲ್‍ಐಸಿ ಕಚೇರಿ ಎದುರು ಜಿಲ್ಲಾ ಲಿಯಾಫಿ ಪದಾಧಿಕಾರಿಗಳು ಹಾಗೂ ಏಜೆಂಟರು ಗುರುವಾರ ಪ್ರತಿಭಟನೆ ನಡೆಸಿದರು.

ಶಾಖಾ ಲಿಯಾಫಿ ಅಧ್ಯಕ್ಷ ಮಂಜುನಾಥ ಹೂಗಾರ ಮಾತನಾಡಿ, ಪಾಲಿಸಿದಾರರಿಗೆ ಬೋನಸ್ ದರ ಹೆಚ್ಚಳ, ಶಾಖೆಗಳಲ್ಲಿ ಗುಣಮಟ್ಟದ ಸೇವೆ, ಕಂತುಗಳ ಮೇಲಿನ ಜಿಎಸ್‍ಟಿಯಿಂದ ವಿನಾಯಿತಿ, ಪ್ರತಿನಿಧಿಗಳ ಕಮಿಷನ್ ದರದಲ್ಲಿ ಹೆಚ್ಚಳ ಮೊದಲಾದ ಬೇಡಿಕೆಗಳ ಈಡೇರಿಕೆಗೆ ನಿಗಮ ನಿರಾಸಕ್ತಿ ತೋರಿಸುತ್ತಿದ್ದು, ಇದರಿಂದ ಪ್ರತಿನಿಧಿಗಳ ಸಂಘಟನೆಗಳು ಪ್ರತಿಭಟನೆಗೆ ನಡೆಸುತ್ತಿವೆ ಎಂದರು.

ಧಾರವಾಡ ವಿಭಾಗೀಯ ಲಿಯಾಫಿ ಸಂಘಟನಾ ಕಾರ್ಯದರ್ಶಿ ಮಾಲತೇಶಗೌಡ ಪಾಟೀಲ ಮಾತನಾಡಿ, ಪಾಲಿಸಿದಾರರ ಪಾಲಿಸಿ ಮೇಲಿನ ಸಾಲ ಮತ್ತು ಇತರ ಆರ್ಥಿಕ ವ್ಯವಹಾರಗಳ ಮೇಲಿನ ಬಡ್ಡಿದರ ಇಳಿಕೆ, ದಾಖಲೆಗಳನ್ನು ಸಲ್ಲಿಸಿದಾಗ ಸ್ವೀಕೃತಿ ನೀಡುವುದು, ಅನೂರ್ಜಿತಗೊಂಡು ಐದು ವರ್ಷ ದಾಟಿದ ಪಾಲಿಸಿಗಳನ್ನು ಊರ್ಜಿತಗೊಳಿಸಲು ಅವಕಾಶ, ಪ್ರತಿನಿಧಿಗಳ ಗ್ರಾಚ್ಯುಟಿ ಮೊತ್ತ ₹20 ಲಕ್ಷಕ್ಕೆ ನಿಗದಿ, ಎಲ್ಲ ಪ್ರತಿನಿಧಿಗಳಿಗೂ ಗುಂಪು ವೈದ್ಯಕೀಯ ವಿಮೆ ವಿಸ್ತರಣೆ, ಟರ್ಮ್ ಪಾಲಿಸಿ ಮೊತ್ತ ಏರಿಕೆ ಇನ್ನಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತಿದೆ ಎಂದರು.

ADVERTISEMENT

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಎಲ್.ಎಸ್. ಶಿವಣ್ಣವರ, ಮಾಜಿ ಅಧ್ಯಕ್ಷ ಎಸ್. ಸಿ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಬಿ.ಟಿ. ಪಾಟೀಲ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.