ಬ್ಯಾಡಗಿ: ‘ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕಳೆದ ಒಂದು ವರ್ಷದಿಂದ ದೂರವಾಗಿದ್ದ ಪೂರ್ಣಿಮಾ ಮತ್ತು ಜಯಪ್ಪ ನೀಲಗುಂದ ದಂಪತಿಯನ್ನು ರಾಜಿ ಸಂದಾನದ ಮೂಲಕ ಒಟ್ಟುಗೂಡಿಸಲಾಯಿತು’ ಎಂದು ಹಿರಿಯ ನ್ಯಾಯಾಧೀಶ ಅಮೋಲ್ ಹಿರೆಕುಡೆ ತಿಳಿಸಿದರು.
ಜೀವನಾಂಶ ಕೋರಿ ಪೂರ್ಣಿಮಾ ತನ್ನ ಪತಿ ಜಯಪ್ಪ ನೀಲಗುಂದ ಅವರ ಮೇಲೆ ಪ್ರಕರಣವನ್ನು ದಾಖಲಿಸಿದ್ದರು. ಒಂದು ಮಗು ಹೊಂದಿದ್ದ ದಂಪತಿಗೆ ಬುದ್ಧಿವಾದ ಹೇಳಿ ಸಾಮರಸ್ಯದಿಂದ ಜೀವನ ಸಾಗಿಸುವಂತೆ ತಿಳಿಹೇಳಿ ಪರಸ್ಪರ ಮಾಲಾರ್ಪಣೆಯನ್ನು ಮಾಡಿಸಲಾಯಿತು ಎಂದು ಹೇಳಿದರು.
ಹಿರಿಯ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ಪೈಕಿ ₹1.28 ಕೋಟಿ ಮೊತ್ತದ, 152 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ₹50.46 ಲಕ್ಷ ಮೊತ್ತದ ವ್ಯಾಜ್ಯ ಪೂರ್ವ 904 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ದಿವಾಣಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ಪೈಕಿ ₹38.49ಲಕ್ಷ ಮೊತ್ತದ ಪ್ರಕರಣಗಳು ಇತ್ಯರ್ಥಗೊಂಡವು ಎಂದು ತಿಳಿಸಿದರು.
₹52.04 ಮೊತ್ತದ ಪಿಎಲ್‌ಸಿ 870 ಪ್ರಕರಣಗಳು ಇತ್ಯರ್ಥಗೊಂಡವೆಂದು ಅವರು ತಿಳಿಸಿದರು.
ಈ ವೇಳೆ ಕಿರಿಯ ನ್ಯಾಯಾಧೀಶ ಸುರೇಶ ವಗ್ಗನವರ, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ಬಾರ್ಕಿ ಉಪಾಧ್ಯಕ್ಷ ಬಿ.ಜಿ.ಹಿರೇಮಠ ಕಾರ್ಯದರ್ಶಿ ಎಂ ಪಿ.ಹಂಜಗಿ, ಸಹ ಕಾರ್ಯದರ್ಶಿ ಎನ್.ಬಿ.ಬಳಿಗಾರ, ಹಿರಿಯ ವಕೀಲರಾದ ಎಫ್.ಎಂ.ಮುಳಗುಂದ, ಆರ್.ಸಿ.ಶಿಡೇನೂರ, ಪಿ.ಸಿ.ಶೀಗಿಹಳ್ಳಿ, ಪ್ರಕಾಶ ಬನ್ನಿಹಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.