ADVERTISEMENT

ರಾಣೆಬೆನ್ನೂರು | ಲೋಕಸಭೆ ಚುನಾವಣೆ: ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ 

​ಪ್ರಜಾವಾಣಿ ವಾರ್ತೆ
Published 2 ಮೇ 2024, 13:29 IST
Last Updated 2 ಮೇ 2024, 13:29 IST
ರಾಣೆಬೆನ್ನೂರಿನ ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಕಾಲೇಜಿನಲ್ಲಿ ನಡೆದ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಅಧ್ಯಕ್ಷಾಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಕೌಸರ್‌ ಮಾರ್ಗದರ್ಶನ ನೀಡಿದರು

ರಾಣೆಬೆನ್ನೂರು: ಮೇ 7 ರಂದು ನಡೆಯಲಿರುವ ಲೋಕಸಭೆ ಚುನಾವಣೆ ಅಂಗವಾಗಿ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಅಧ್ಯಕ್ಷಾಧಿಕಾರಿಗಳಿಗೆ ಬುಧವಾರ ನಗರದ ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಪಿಯು ಕಾಲೇಜಿನಲ್ಲಿ ಸೆಕ್ಟರ್‌ ಆಫೀಸರ್‌ ಮತ್ತು ಮಾಸ್ಟರ್‌ ಟ್ರೈನರ್‌ಗಳಿಂದ ಎರಡನೇ ಸುತ್ತಿನ ತರಬೇತಿ ನಡೆಯಿತು.

ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಕೌಸರ್‌ ಮಾತನಾಡಿ, ‘ಚುನಾವಣೆ ಆಯೋಗದ ನಿರ್ದೇಶನದಂತೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವುದು ನಮ್ಮೆಲ್ಲರ ಕರ್ತವ್ಯ. ತರಬೇತಿ ಪ್ರಯೋಜನ ಪಡೆದು ಲೋಕಸಭೆ ಚುನಾವಣೆ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕರಿಸಬೇಕು’ ಎಂದರು.

ಮತಗಟ್ಟೆ ಹಾಗೂ ಮತದಾನ ಸಂದರ್ಭದಲ್ಲಿ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಬೇಕು. ಮಸ್ಟರಿಂಗ್‌ ಮತ್ತು ಡಿ ಮಸ್ಟರಿಂಗ್‌ ಕೇಂದ್ರದಲ್ಲಿ ಸಾಮಗ್ರಿ ಪಡೆಯುವುದು. ಅಣುಕು ಮತದಾನ, ಮತದಾನ ಪ್ರಾರಂಭ, ಮತದಾನ ಮುಕ್ತಾಯಗೊಳಿಸುವ ಜವಾಬ್ದಾರಿ, ಮತದಾನದ ಎಲ್ಲ ಪ್ರಕ್ರಿಯೆಗಳ ಅಂಕಿ ಅಂಶಗಳನ್ನು ಚುನಾವಣಾಧಿಕಾರಿಗಳಿಗೆ ವರದಿ ನೀಡುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಏನಾದರೂ ಸಂಶಯವಿದ್ದರೆ ತರಬೇತುದಾರರಿಂದ ಮಾಹಿತಿ ಪಡೆದು ಗೊಂದಲ ನಿವಾರಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.

ADVERTISEMENT

ಒಟ್ಟು 258 ಪೊಸ್ಟಲ್‌ ಬ್ಯಾಲೆಟ್‌ ವಿತರಣೆಯಾಗಿದ್ದವು. ಇಂದು ನಡೆದ ತರಬೇತಿಗೆ ಒಟ್ಟು 1172 ಮತಗಟ್ಟೆ ಅಧಿಕಾರಿಗಳು ಹಾಜರಾಗಿದ್ದರು. ಇಬ್ಬರು ಮಾತ್ರ ಗೈರಾಗಿದ್ದರು. 1172 ಮತಗಟ್ಟೆ ಅಧಿಕಾರಿಗಳಿಗೆ ಮತ್ತು 293 ಪೋಲಿಂಗ್‌ ಟೀಮ್‌ಗೆ, ತಿಂಡಿ, ಚಹಾ, ಊಟ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಬಸ್‌ ಸೌಲಭ್ಯ ಒದಗಿಸಲಾಗಿತ್ತು. ತರಬೇತಿಗೆ ಹಾಜರಾದ ಎಲ್ಲ ಸಿಬ್ಬಂದಿಗೆ ಇಡಿಸಿಗಳನ್ನು ತರಬೇತಿ ಕೊಠಡಿಯಲ್ಲಿಯೇ ವಿತರಿಸಲಾಯಿತು. ಪೊಸ್ಟಲ್‌ ಬ್ಯಾಲಟ್‌ಗಳನ್ನು ಹಾಕಲು 6 ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು.

ಜಿಲ್ಲಾ ನೋಡಲ್‌ ಅಧಿಕಾರಿ ಪ್ರವೀಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌ ಪಾಟೀಲ, ತಹಶೀಲ್ದಾರ್‌ ಶಿವಕುಮಾರ, ಉಪತಹಶೀಲ್ದಾರ್‌ ಜಮೀರ್‌ ಮನಿಯಾರ್‌, ಎಂ.ಎಚ್‌. ಕಡೂರ, ಶ್ಯಾಮ ಗೊರವರ, ಲಿಂಗರಾಜ ಸುತ್ತಕೋಟಿ, ಪೂಜಾರ, ಚಂದ್ರು ದೇವಾಂಗದ, ಎಚ್‌.ಎಚ್‌. ಜಾಡರ, ರವೀಶ ಆರಾಧ್ಯ, ಶಾಂತಮಣಿ, ಕೊಟ್ರೇಶ ಹಿರೇಮಠ, ರುದ್ರೇಶ, ಮಂಜುನಾಥ ಕೆಂಚರಡ್ಡಿ, ಅಶೋಕ ಇದ್ದರು.

ರಾಣೆಬೆನ್ನೂರಿನ ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಕಾಲೇಜಿನಲ್ಲಿ ನಡೆದ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಸಹಾಯಕ ಅಧ್ಯಕ್ಷಾಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಕೌಸರ್‌ ಮಾರ್ಗದರ್ಶನ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.