ADVERTISEMENT

‘ಸಂಗೀತ ಮನಸ್ಸಿಗೆ ಶಾಂತಿ ನೆಮ್ಮದಿ ನೀಡಲಿದೆ’

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:20 IST
Last Updated 8 ಅಕ್ಟೋಬರ್ 2024, 16:20 IST
ರಾಣೆಬೆನ್ನೂರಿನ ಕರ್ನಾಟಕ ಸಂಘದಲ್ಲಿ ನಡೆದ 88 ನೇ ವರ್ಷದ ನಾಡಹಬ್ಬದ ನಾಲ್ಕದೇ ದಿನದ ಸಭಾ ಕಾರ್ಯಕ್ರಮದಲ್ಲಿ ಧಾರವಾಡದ ಅಭಿವ್ಯಕ್ತಿ ಕಲಾ ತಂಡ ರಂಗಕಲಾವಿದುಷಿ ಸೀತಾ ಡಿ. ಛಪ್ಪರ ಹಾಗೂ ಅವರ ತಂಡ  ಶ್ರೀಕೃಷ್ಣ ಪಾರಿಜಾತ ನೃತ್ಯ ರೂಪಕ ಹಾಗೂ ಹರಿದಾಸ ಸಾಹಿತ್ಯಕ್ಕೆ ನೃತ್ಯ ಪ್ರದರ್ಶಿಸಿದರು. 
ರಾಣೆಬೆನ್ನೂರಿನ ಕರ್ನಾಟಕ ಸಂಘದಲ್ಲಿ ನಡೆದ 88 ನೇ ವರ್ಷದ ನಾಡಹಬ್ಬದ ನಾಲ್ಕದೇ ದಿನದ ಸಭಾ ಕಾರ್ಯಕ್ರಮದಲ್ಲಿ ಧಾರವಾಡದ ಅಭಿವ್ಯಕ್ತಿ ಕಲಾ ತಂಡ ರಂಗಕಲಾವಿದುಷಿ ಸೀತಾ ಡಿ. ಛಪ್ಪರ ಹಾಗೂ ಅವರ ತಂಡ  ಶ್ರೀಕೃಷ್ಣ ಪಾರಿಜಾತ ನೃತ್ಯ ರೂಪಕ ಹಾಗೂ ಹರಿದಾಸ ಸಾಹಿತ್ಯಕ್ಕೆ ನೃತ್ಯ ಪ್ರದರ್ಶಿಸಿದರು.    

ರಾಣೆಬೆನ್ನೂರು: ಸಂಗೀತದ ಮೂಲಕ ರೋಗ ಗುಣಪಡಿಸುವ ವೈಜ್ಞಾನಿಕ ಪ್ರಯೋಗ ಯಶಸ್ವಿಯಾಗಿದ್ದು, ಭಾರತೀಯ ಸಂಗೀತ ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಫುಲ್ಲತೆ ನೀಡುತ್ತದೆ ಎಂದು ರಾಷ್ಟ್ರೀಯ ಸಮಗ್ರ ವೈದ್ಯಕೀಯ ಸಂಸ್ಥೆ (ನೀಮಾ) ಜಿಲ್ಲಾ ಕಾರ್ಯದರ್ಶಿ ಡಾ.ಶ್ರೀಕಾಂತ.ವೀ.ಕಳಸದ ಹೇಳಿದರು.

ಇಲ್ಲಿನ ಸ್ಟೇಶನ್‌ ರಸ್ತೆಯ ಕರ್ನಾಟಕ ಸಂಘದಲ್ಲಿ ಈಚೆಗೆ 88ನೇ ವರ್ಷದ ನಾಡಹಬ್ಬದ 4ನೇ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ರಕ್ತದೊತ್ತಡ ಹೆಚ್ಚಿಸುವ ಡಿಜೆ ಸಂಸ್ಕೃತಿಯಿಂದ ಹೃದಯಾಘಾತದ ಘಟನೆಗಳು ಹೆಚ್ಚುತ್ತಿದ್ದರೂ ಯುವಜನತೆ ಡಿಜೆ ಸಂಸ್ಕೃತಿಯತ್ತ ವಾಲುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ನೀವು ಆರೋಗ್ಯವಾಗಿ ಇರಬೇಕೇ ಶಾಸ್ತ್ರೀಯ ಸಂಗೀತ ಆಲಿಸಿರಿ, ದೇಶೀಯ ನೃತ್ಯ ಅಭ್ಯಾಸ ಮಾಡಿ ಎಂದರು.

ಶ್ರೀಪಾದ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೇ ಕಾರ್ಯ ನಿರ್ವಹಿಸುವ ನಮ್ಮ ಕಾರ್ಯಕರ್ತರ ಬಗ್ಗೆ ಹೆಮ್ಮೆ ಎನಿಸುತ್ತದೆ. ಉತ್ತಮ ಕಾರ್ಯಕ್ರಮ ಏರ್ಪಡಿಸಿದರೂ ಜನರನ್ನು ಕರೆತರುವಲ್ಲಿ ನಾವು ಎಡವುತ್ತಿದ್ದೇವೆಯೋ ಅಥವಾ ಜನರಿಗೆ ಇಂತಹ ಕಾರ್ಯಕ್ರಮಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆಯೋ ತಿಳಿಯುತ್ತಿಲ್ಲ ಎಂದರು.

ADVERTISEMENT

ಇದೇ ಸಂದರ್ಭದಲ್ಲಿ ಧಾರವಾಡದ ಅಭಿವ್ಯಕ್ತಿ ಕಲಾ ತಂಡ ರಂಗಕಲಾ ವಿದುಷಿ ಸೀತಾ.ಡಿ.ಛಪ್ಪರ ಅವರ ತಂಡ ಶ್ರೀಕೃಷ್ಣ ಪಾರಿಜಾತ ನೃತ್ಯ ರೂಪಕ ಹಾಗೂ ಹರಿದಾಸ ಸಾಹಿತ್ಯಕ್ಕೆ ನೃತ್ಯ ಸಂಯೋಜಿಸಿ ನೀಡಿದ ಪ್ರದರ್ಶನ ಪ್ರೇಕ್ಷಕರ ಮನ ರಂಜಿಸಿದವು. ಅಭಿನಂದನ ಜೋಶಿ, ಶ್ರೀನಿಧಿ ಶಿರಹಟ್ಟಿ, ಸ್ವರೂಪ ಜೋಶಿ, ನಾಗರಾಜ.ಡಿ.ಜೋಶಿ, ಸಂಜೀವ ಶಿರಹಟ್ಟಿ, ಶ್ರೀನಿವಾಸ ಏಕಬೋಟೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.