ADVERTISEMENT

ಹಾವೇರಿ ಬಸ್ ನಿಲ್ದಾಣದಲ್ಲಿ NWKRTC ಬಸ್ ಚಕ್ರ ಹರಿದು ಕಾಲು ತಂಡಾಗಿದ್ದ ರೈತ ಸಾವು

‘ಅಪಘಾತಕ್ಕೆ ಕಾರಣ ಎನ್ನಲಾದ ಬಸ್ ಚಾಲಕ ಮಲ್ಲಿಕಸಾಬ್ ಅವರನ್ನು ಬಂಧಿಸಲಾಗಿದೆ. ಬಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:55 IST
Last Updated 19 ನವೆಂಬರ್ 2024, 15:55 IST
<div class="paragraphs"><p>ಹಾವೇರಿ ಬಸ್ ನಿಲ್ದಾಣದಲ್ಲಿ NWKRTC ಬಸ್ ಚಕ್ರ ಹರಿದು ಕಾಲು ತಂಡಾಗಿದ್ದ ರೈತ ಸಾವು</p></div>

ಹಾವೇರಿ ಬಸ್ ನಿಲ್ದಾಣದಲ್ಲಿ NWKRTC ಬಸ್ ಚಕ್ರ ಹರಿದು ಕಾಲು ತಂಡಾಗಿದ್ದ ರೈತ ಸಾವು

   

ಹಾವೇರಿ: ಹಾವೇರಿಯ ವಾಕರಸಾಸಂ ಕೇಂದ್ರ ನಿಲ್ದಾಣದ ಪ್ರವೇಶದ್ವಾರದಲ್ಲಿ ಬಸ್ಸಿನ ಚಕ್ರ ಹರಿದು ಎರಡೂ ಕಾಲುಗಳು ತುಂಡಾಗಿದ್ದರಿಂದ ತೀವ್ರ ಗಾಯಗೊಂಡಿದ್ದ ರೈತ ಕರಿಯಪ್ಪ ಮುಚ್ಚಿಕೊಪ್ಪನವರ ಅವರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕನಕಾಪುರ ಕರಿಯಪ್ಪ, ತಮ್ಮೂರಿಗೆ ಹೋಗುವ ಬಸ್‌ ಹತ್ತಲೆಂದು ನಿಲ್ದಾಣದೊಳಗೆ ಹೊರಟಿದ್ದರು. ನರಗುಂದದಿಂದ ಬೆಂಗಳೂರಿಗೆ ಹೊರಟಿದ್ದ ಬಸ್‌, ಅತೀ ವೇಗದಲ್ಲಿ ಬಂದು ಕರಿಯಪ್ಪ ಅವರಿಗೆ ಗುದ್ದಿತ್ತು. ಕರಿಯಪ್ಪ ಅವರ ಕಾಲುಗಳ ಮೇಲೆಯೇ ಬಸ್ಸಿನ ಚಕ್ರ ಹರಿದಿತ್ತು.

ADVERTISEMENT

ಅಪಘಾತದಲ್ಲಿ ತೀವ್ರ ಗಾಯಗೊಂಡು ನರಳುತ್ತಿದ್ದ ಕರಿಯಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಕಿಮ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

‘ಅಪಘಾತಕ್ಕೆ ಕಾರಣ ಎನ್ನಲಾದ ಬಸ್ ಚಾಲಕ ಮಲ್ಲಿಕಸಾಬ್ ಅವರನ್ನು ಬಂಧಿಸಲಾಗಿದೆ. ಬಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.