ಹಾವೇರಿ: ಜೇನು ಹುಳು ಕಡಿದು ತೀವ್ರ ಗಾಯಗೊಂಡಿದ್ದ ನಿಂಗವ್ವ ಯಲ್ಲವ್ವ ಶಿರಬಡಗಿ (65) ಅವರು ಹುಬ್ಬಳ್ಳಿ ಕಿಮ್ಸ್ನಲ್ಲಿ ಮೃತಪಟ್ಟಿದ್ದಾರೆ.
ಶಿಗ್ಗಾವಿ ತಾಲ್ಲೂಕಿನ ಸಿಂಗಾಪೂರ ಗ್ರಾಮದ ನಿವಾಸಿ ನಿಂಗವ್ವ ಅವರು ನ. 13ರಂದು ಚೆಂಡು ಹೂವು ಬಿಡಿಸಲು ಹೊಲಕ್ಕೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಜೇನು ಹುಳುಗಳು ಕಡಿದಿದ್ದವು.
ತೀವ್ರ ಗಾಯಗೊಂಡು ಅಸ್ವಸ್ಥಗೊಂಡಿದ್ದ ನಿಂಗವ್ವ ಅವರನ್ನು ಶಿಗ್ಗಾವಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು.
'ಜೇನು ಹುಳು ಕಡಿದು ನಿಂಗವ್ವ ಮೃತಪಟ್ಟಿದ್ದಾರೆ. ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇಲ್ಲವೆಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಬಂಕಾಪುರ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.