ADVERTISEMENT

ಶಿಗ್ಗಾವಿ: ಕಾನೂನಿನಡಿ ವಿವಾಹ ನೋಂದಣಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2024, 5:39 IST
Last Updated 25 ಮೇ 2024, 5:39 IST
ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ರಾಮ ಸೇನಾ ಧಾರವಾಡ ವಿಭಾಗದ ಪದಾಧಿಕಾರಿಗಳು ಅಂತರಧರ್ಮೀಯ ವಿವಾಹ ನೋಂದಣಿಯಲ್ಲಿ ಕಾನೂನು ನಿಯಮ ಪಾಲಿಸಿ ನೋಂದಣಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ತಾಲ್ಲೂಕು ವಿವಾಹ ನೋಂದಣಿ ಅಧಿಕಾರಿ ವಿನಯ್ ಕೀರ್ತಿ ಆರ್ ಅವರಿಗೆ ಮನವಿ ಸಲ್ಲಿಸಿದರು
ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ರಾಮ ಸೇನಾ ಧಾರವಾಡ ವಿಭಾಗದ ಪದಾಧಿಕಾರಿಗಳು ಅಂತರಧರ್ಮೀಯ ವಿವಾಹ ನೋಂದಣಿಯಲ್ಲಿ ಕಾನೂನು ನಿಯಮ ಪಾಲಿಸಿ ನೋಂದಣಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ತಾಲ್ಲೂಕು ವಿವಾಹ ನೋಂದಣಿ ಅಧಿಕಾರಿ ವಿನಯ್ ಕೀರ್ತಿ ಆರ್ ಅವರಿಗೆ ಮನವಿ ಸಲ್ಲಿಸಿದರು    

ಶಿಗ್ಗಾವಿ: ಅಂತರಧರ್ಮೀಯ ವಿವಾಹ ನೋಂದಣಿಯಲ್ಲಿ ಕಾನೂನು ನಿಯಮ ಪಾಲಿಸುವ ಮೂಲಕ ವಿವಾಹ ನೋಂದಣಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ರಾಮ ಸೇನಾ ಧಾರವಾಡ ವಿಭಾಗದ ಪದಾಧಿಕಾರಿಗಳು ತಾಲ್ಲೂಕು ವಿವಾಹ ನೋಂದಣಿ ಅಧಿಕಾರಿ ತಾಲ್ಲೂಕು ವಿವಾಹ ನೋಂದಣಿ ಅಧಿಕಾರಿ ವಿನಯ್ ಕೀರ್ತಿ ಆರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಇತ್ತೀಚೆಗೆ ಅಂತರ ಧರ್ಮದ ವಿವಾಹಗಳು ಕೋಮು ಸ್ವರೂಪ ಪಡೆಯುತ್ತಿವೆ. ಗಲಭೆ, ಸಾಮರಸ್ಯ ಹಾಳು ಮಾಡುತ್ತಿರುವ ಘಟನೆಗಳು ರಾಜ್ಯದಲ್ಲಿ ಅಲ್ಲಲ್ಲಿ ಜರುಗುತ್ತಿವೆ. ಕೆಲವು ವಿವಾಹ ನೋಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆಗಳನ್ನು ಪರಿಶೀಲಿಸದೇ ನೋಟಿಸ್ ಬೋರ್ಡಿಗೆ ಪ್ರತಿ ಹಾಕದೇ ವಿವಾಹ ಮಾಡುವ ಬಗ್ಗೆ ದೂರುಗಳಿದ್ದು, ತಮ್ಮ ಕಚೇರಿಯಲ್ಲಿ ಮತಾಂತರ ತಡೆ-2022ಕಾಯ್ದೆ ಸೇರಿದಂತೆ ಯಾವುದೇ ಕಾನೂನಿನ ಲೋಪಗಳು ಜರುಗದಂತೆ ಜಾಗೃತಿ ವಹಿಸಬೇಕು. ಕೋಮು ಸೂಕ್ಷ್ಮ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಾಮ ಸೇನಾ ಧಾರವಾಡ ವಿಭಾಗದ ಅಧ್ಯಕ್ಷ ಗದಿಗೆಪ್ಪ ಕುರವತ್ತಿ, ಸಿದ್ದಾರೋಢ ವಿಭೂತಿಮಠ, ಅಶೋಕ ಬಳಿಗಾರ, ನಾಗರಾಜ ಅರಳಿಕಟ್ಟಿ, ಚಂದ್ರಶೇಖರ ಮೇಣಸಿನಕಾಯಿ, ರಾಕೇಶ ರಾಯಣ್ಣವರ, ಸಂತೋಷ ಅಕ್ಕಿ ಸೇರಿದಂತೆ ರಾಮ ಸೇನಾ ಧಾರವಾಡ ವಿಭಾಗದ ಅನೇಕ ಪದಾಧಿಕಾರಿಗಳು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.