ರಾಣೆಬೆನ್ನೂರುನಗರದಲ್ಲಿ 16 ವರ್ಷಗಳಿಂದಪೌರಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದು ಕೋವಿಡ್-19 ವ್ಯಾಪಕವಾಗಿ ಹರಡಿದಾಗ ಸಹಪಾಠಿಗಳೊಂದಿಗೆ ‘ಕೊರೊನಾ ವಾರಿಯರ್’ ಆಗಿ ಜೀವದ ಹಂಗು ತೊರೆದು ಹಗಲು ರಾತ್ರಿ ಎನ್ನದೇ ಸೇವೆ ಮಾಡಿದ್ದೇನೆ. ನನ್ನ ಪಾಲಿಗೆ ಕರ್ತವ್ಯವೇ ದೇವರು.
ಇಲಾಖೆ ಅಧಿಕಾರಿಗಳು ಸೂಚಿಸಿದ ಕೋವಿಡ್ ಕೇಂದ್ರ, ಕ್ವಾರಂಟೈನ್ ಕೇಂದ್ರಗಳು, ತಹಶೀಲ್ದಾರ್ ಕಚೇರಿ, ಆಸ್ಪತ್ರೆ, ಬ್ಯಾಂಕ್, ವಿವಿಧ ನಗರಗಳು, 35 ವಾರ್ಡ್‌ಗಳು, ಮನೆ, ಮಠ, ಶಾಲಾ ಕಾಲೇಜು, ವಸತಿ ನಿಲಯಗಳಿಗೆ ಸ್ಯಾನಿಟೈಸರ್ ಮಾಡುವ ಕಾಯಕವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.ಕೊರೊನಾಕ್ಕೆ ಎಂದಿಗೂ ಹೆದರಲಿಲ್ಲ.
ಲಾಕ್‌ಡೌನ್‌ನಿಂದ ಹೋಟೆಲ್– ಖಾನಾವಳಿ ಬಂದ್ ಇರುತ್ತಿದ್ದ ಕಾರಣ ದುಡಿದು ದಣಿವಾದರೂ ಒಮ್ಮೊಮ್ಮೆ ತಿನ್ನಲು ಏನೂಸಿಗುತ್ತಿರಲಿಲ್ಲ. ಕೆಲಸದ ಒತ್ತಡದಲ್ಲಿ ಸುಸ್ತಾದರೂ ಮಾತ್ರೆ ತೆಗೆದುಕೊಂಡು ಕರ್ತವ್ಯ ಮಾಡಿದ್ದೇನೆ. ಮನೆಯಲ್ಲಿ ಮಕ್ಕಳು, ಕುಟುಂಬದವರು ‘ನಿನಗೆ ಕೋವಿಡ್ ಬಂದರೆ ನಮ್ಮ ಗತಿ ಏನು’ ಎಂದು ಪ್ರಶ್ನಿಸುತ್ತಿದ್ದರು. ಆಗ ದೇವರೇ ಗತಿ ಎನ್ನುತ್ತಿದ್ದೆ. ನನ್ನ ರಣೋತ್ಸಾಹಕ್ಕೆ ಕೋವಿಡ್ ಹತ್ತಿರ ಸುಳಿಯಲಿಲ್ಲ.ಸ್ಯಾನಿಟೈಸ್ ಮಾಡಿದ್ದರಿಂದ ಕೆಲವೊಮ್ಮೆ ಕೈ ಚರ್ಮ ತುರಿಕೆ ಬರುತ್ತಿತ್ತು. ಆದರೂ ಕರ್ತವ್ಯ ದಿಂದ ಎಂದಿಗೂ ವಿಮುಖನಾಗಲಿಲ್ಲ.
– ಹನುಮಂತ ಸಣ್ಣಪ್ಪನವರ, ಪೌರಕಾರ್ಮಿಕ, ರಾಣೆಬೆನ್ನೂರು ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.