‘ಸತ್ಯ ಸಾಯಿ ಸೇವಾ ಸಮಿತಿ’ ಉದ್ದೇಶವೇ ಸೇವೆಯಾಗಿದ್ದು,ಮಾಡುವ ಕಾಯಕ ದಲ್ಲಿ ಫಲ ಅಪೇಕ್ಷಿಸಬೇಡ, ಶ್ರಮದ ಪಾಲಿನ ಫಲ ನಿನಗೆ ಸೇರಲಿದೆ’ ಎಂಬ ತತ್ವದಡಿ ನಡೆಯುತ್ತಿದ್ದೇವೆ.
ಕೋವಿಡ್ ಲಾಕ್‌ಡೌನ್ ಸಂದರ್ಭ ಪಟ್ಟಣದ ಸತ್ಯ ಸಾಯಿ ಸೇವಾ ಸಮಿತಿ ವತಿಯಿಂದ ಮೂರು ತಿಂಗಳು ಕೊರೊನಾ ವಾರಿಯರ್ಸ್‌ಗೆ ನಿತ್ಯ ಬೆಲ್ಲ, ನೀರು, ಪಾನಕ, ಮಜ್ಜಿಗೆ ವಿತರಿಸುವ ಸೇವೆ ಮಾಡಿದ್ದೇವೆ.
ಪಟ್ಟಣದ ಅಲೆಮಾರಿ ಜನರಿಗೆ ಸೇರಿದಂತೆ ಪಟ್ಟಣದ ಬಡಕೂಲಿ ಕಾರ್ಮಿಕರಿಗೆ ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ, ಜೀರಿಗೆ, ಶ್ಯಾವಿಗೆ ಸೇರಿದಂತೆ ವಿವಿಧ ಪದಾರ್ಥಗಳ ಐದು ನೂರಕ್ಕೂ ಹೆಚ್ಚಿನ ಬೆಲೆಯ ಒಂದು ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದೇವೆ. ಆರೋಗ್ಯ ಇಲಾಖೆ ನೌಕರರು, ಪೊಲೀಸ್, ಪೌರಕಾರ್ಮಿಕರು, ಕಂದಾಯ ಇಲಾಖೆ ನೌಕರರು ಸೇರಿದಂತೆ ಕೊರೊನಾ ವಾರಿಯರ್ಸ್‌ಗಳಿಗೆ ಊಟದ ವ್ಯವಸ್ಥೆ ಮಾಡಿದ್ದೆವು.
ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತ ಕಣ್ಣಿನ ತಪಾಸಣೆ, 45ರಿಂದ 60 ವರ್ಷದವರಿಗೆ ಉಚಿತ ಕನ್ನಡಕ ನೀಡಲಾಗುತ್ತಿದೆ. ಬೆಂಗಳೂರಿನ ಸಾಯಿ ಆಸ್ಪತ್ರೆಯಲ್ಲಿ ಕ್ಷೇತ್ರದ 25 ಜನರಿಗೆ ಉಚಿತ ಚಿಕಿತ್ಸೆ ಕೊಡಿಸಿದ್ದೇವೆ.
–ಉದಯಶಂಕರ ಹೊಸಮನಿ, ತಾಲ್ಲೂಕು ಸಂಚಾಲಕ,ಸತ್ಯ ಸಾಯಿ ಸೇವಾ ಸಮಿತಿ, ಶಿಗ್ಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.