ADVERTISEMENT

ಹಾವೇರಿ | ಉತ್ತಮ ಮಳೆ: ತಂಪಾದ ಇಳೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 15:57 IST
Last Updated 20 ಜೂನ್ 2024, 15:57 IST
   

ಹಾವೇರಿ: ನಗರದ ಹಲವು ಪ್ರದೇಶಗಳಲ್ಲಿ ಗುರುವಾರ ಸಂಜೆ ಉತ್ತಮ ಮಳೆಯಾಗಿದ್ದು, ಹಲವು ದಿನಗಳಿಂದ ಬಿಸಿಲಿನ ತಾಪದಿಂದ ಕಾದಿದ್ದ ಇಳೆ ತಂಪಾಯಿತು.

ಮುಂಗಾರು ಆರಂಭದ ದಿನದಂದು ವಾಡಿಕೆಯಂತೆ ಸುರಿದಿದ್ದ ಮಳೆ, ನಂತರ ಕಡಿಮೆಯಾಗಿತ್ತು. ಬಿತ್ತನೆ ಮಾಡಿದ್ದ ರೈತರು, ಮಳೆಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ವಾರದಿಂದ ಬಿಸಿಲು ಹೆಚ್ಚಿತ್ತು. ಆಗಾಗ ಮೋಡ ಕಾಣಿಸಿದರೂ ಮಳೆಯ ಸುಳಿವು ಇರಲಿಲ್ಲ.

ಗುರುವಾರವೂ ಬೆಳಿಗ್ಗೆಯಿಂದ ಸಂಜೆವರೆಗೆ ಬಿಸಿಲು ಹೆಚ್ಚಿತ್ತು. ಸಂಜೆ ನಂತರ ಮೋಡ ಕವಿದ ವಾತಾವರಣ ಕಾಣಿಸಿ, ತುಂತುರು ಮಳೆ ಸುರಿಯಲಾರಂಭಿಸಿತು. ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೂ ಬಹುತೇಕ ಕಡೆ ಜೋರು ಮಳೆ ಆಯಿತು.

ADVERTISEMENT

ಅಶ್ವಿನಿನಗರ, ವಿದ್ಯಾನಗರ, ಬಸವೇಶ್ವರ ನಗರ, ಹಳೇ ಪಿ.ಬಿ.ರಸ್ತೆ, ಕಾಗಿನೆಲೆ ರಸ್ತೆ, ಹಾನಗಲ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಆಯಿತು.

ಹಾವೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಮಳೆ ಜೋರಾಯಿತು. ಸವಣೂರು ತಾಲ್ಲೂಕಿನಲ್ಲಿಯೂ ತುಂತುರು ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.