ರಾಣೆಬೆನ್ನೂರು: ಇಲ್ಲಿನ ಮೇಡ್ಲೇರಿ ರಸ್ತೆಯ ವಾಗೀಶನಗರದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ನ.24 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾವೇರಿ, ರಂಗಕುಸುಮ ಪ್ರಕಾಶನ ಆಶ್ರಯದಲ್ಲಿ ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸೌರಭ, ವಾರ್ಷಿಕೋತ್ಸವ ಸಮಾರಂಭ, ಪುಸ್ತಕ ಬಿಡುಗಡೆ, ಕವಿ ಗೋಷ್ಠಿ ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್.ಅಶೋಕ ಅಧ್ಯಕ್ಷತೆ ವಹಿಸುವರು. ಶಿವಮೊಗ್ಗದ ರಂಗಾಯಣ ನಿರ್ದೇಶಕ ಪ್ರಸನ್ನ.ಡಿ.ಸಾಗರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸುವರು. ಸಂಘಟಕ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಈಡಿಗರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಚನ್ನರಾಯಟ್ಟಣದ ಸಚಿನ್ ಎಸ್.ವಿ, ಹು.ವಿ.ಸಿದ್ದೇಶ ಮತ್ತು ಮಹಾದೇವ ಆಗಮಿಸುವರು.
ಕವಿ ಮತ್ತ ಕತೆಗಾರ ಲಿಂಗರಾಜ ಸೊಟ್ಟಪ್ಪನವರ ಮಕ್ಕಳ ಮನೋವಿಕಾಸಕ್ಕಾಗಿ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಉಪನ್ಯಾಸ ನೀಡುವರು. ಪ್ರಾಧ್ಯಾಪಕ ಎಂ.ಈ. ಶಿವಕುಮಾರ ಸಾಮಾಜಿಕ ಸಾಮರಸ್ಯ ಹಾಗೂ ಸದೃಢತೆಗೆ ಪಾಲಕರ ಮಹತ್ಸವ ಕುರಿತು ಮಾತನಾಡುವರು.
ಚಲನಚಿತ್ರ ನಟಿ ಮಾಲತಿ ಮೈಸೂರು, ಶಿರಸಿಯ ಸುಮಾ ವೆಂಕಟೇಶ ಹೆಗ್ಡೆ, ರಾಣೆಬೆನ್ನೂರಿನ ಕಲಾವಿದೆ ಪ್ರಿಯಾ ಸವಣೂರ, ಧಾರವಾಡದ ಶ್ರೀಕಾಂತ ಈಳಿಗೇರ, ರಾಯಚೂರಿನ ನಾಗರತ್ನ ಗಂಗಾವತಿ ಅವರಿಗೆ ‘ಕರ್ನಾಟಕ ಕಲಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಹಾವೇರಿಯ ಗಣೇಶ ರಾಯ್ಕರ, ಧಾರವಾಡದ ಸವಿತಾ ಗೌಡರ ಜಹಾಂಗೀರ, ಕೊಪ್ಪಳದ ಗುರುರಾಜ ಹೊಸಪೇಟೆ, ನಗರದ ಪರಮೇಶ ಐರಣಿ, ವಿಜಯಪುರದ ಧರ್ಮನಗೌಡ್ರ ಅವರಿಗೆ ರಂಗಕುಸುಮ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವೆಂಕಟೇಶ ಈಡಿಗೇರ, ಕೊಪ್ಪಳದ ಸುರೇಶ ತಂಗೋಡ, ವಿಜಯಪುರದ ಹಾಲಪ್ಪ ಚಿಗಟೇರಿ, ಶಿವಮೊಗ್ಗದ ಸಿ.ಎಚ್. ನಾಗೇಂದ್ರಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಆನಂದ ತಾಮನ್ಕರ ಅವರಿಗೆ ರಂಗಕಾವ್ಯ ಸಾಹಿತ್ಯಸಿರಿ ಪ್ರಶಸ್ತಿ ನೀಡಲಾಗುವುದು.
ನಂತರ ನಗರದ ಸಾಯಿ ಡ್ಯಾನ್ಸ್ ಟ್ರೂಪ್, ಶಾರದಾ ಭರತನಾಟ್ಯ ಕಲಾಶಾಲೆ ಮತ್ತು ರಾಜೇಶ್ವರಿ ಪ್ರೌಢಶಾಲೆ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.