ADVERTISEMENT

ಹಾವೇರಿ | ಕಡ್ಡಿ ಮೆಣಸಿನಕಾಯಿಗೆ ದಾಖಲೆ ದರ

ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 16:21 IST
Last Updated 21 ಡಿಸೆಂಬರ್ 2023, 16:21 IST

ಬ್ಯಾಡಗಿ (ಹಾವೇರಿ ಜಿಲ್ಲೆ): ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 13,417 ಕ್ವಿಂಟಲ್ (53,669 ಚೀಲ) ಮೆಣಸಿನಕಾಯಿಯನ್ನು ಮಾರಾಟಕ್ಕೆ ತರಲಾಗಿದ್ದು, ನಾಲ್ಕು ಚೀಲ ಕಡ್ಡಿ ಮೆಣಸಿನಕಾಯಿ ₹70,080 ರಂತೆ ಗರಿಷ್ಠ ಬೆಲೆಗೆ ಮಾರಾಟವಾಗಿದೆ. ಕಳೆದ ಗುರುವಾರಕ್ಕಿಂತ ₹5 ಸಾವಿರ ಹೆಚ್ಚಳವಾಗಿದೆ.

ಮೊದಲ ಬಾರಿಗೆ ಕಡ್ಡಿ ಮೆಣಸಿನಕಾಯಿ ದಾಖಲೆಯ ದರದಲ್ಲಿ ಮಾರಾಟವಾಗಿದೆ. ಗುಂಟೂರ ತಳಿ ಮೆಣಸಿನಕಾಯಿ ₹19,289ರಂತೆ ಗರಿಷ್ಠ ಬೆಲೆಗೆ ಮಾರಾಟವಾಗಿದ್ದು, ಸ್ಥಿರತೆ ಕಾಯ್ದುಕೊಂಡಿದೆ.

2 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ ಗೆ ₹62,399ರಂತೆ ಗರಿಷ್ಠ ಬೆಲೆಗೆ ಮಾರಾಟವಾಗಿದ್ದು, ಕಳೆದ ಸೋಮವಾರಕ್ಕಿಂತ ₹2 ಸಾವಿರ ಇಳಿಕೆಯಾಗಿದೆ. ಕಳೆದ ಗುರುವಾರ ಮಾರುಕಟ್ಟೆಗೆ 12,942 ಕ್ವಿಂಟಲ್ (51,765 ಚೀಲ) ಮೆಣಸಿನಕಾಯಿ ಆವಕವಾಗಿತ್ತು. ತೇವಾಂಶ ಹೆಚ್ಚಿರುವ 272 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. 

ADVERTISEMENT

‘ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹ 43,699, ಕಡ್ಡಿ ₹44,509 ಹಾಗೂ ಗುಂಟೂರ ತಳಿ ₹16,209 ರಂತೆ ಮಾರಾಟವಾಗಿದೆ. ಗುರುವಾರದ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 292 ಖರೀದಿ ವರ್ತಕರು ಪಾಲ್ಗೊಂಡಿದ್ದರು’ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.