ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕ ಮತ್ತೆ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 13:23 IST
Last Updated 20 ಜೂನ್ 2024, 13:23 IST
ಬ್ಯಾಡಗಿ ಎಪಿಎಂಸಿಗೆ ಮಾರಾಟಕ್ಕೆ ತಂದಿರುವ ಮೆಣಸಿನಕಾಯಿ ಚೀಲಗಳು (ಸಾಂದರ್ಭಿಕ ಚಿತ್ರ)
ಬ್ಯಾಡಗಿ ಎಪಿಎಂಸಿಗೆ ಮಾರಾಟಕ್ಕೆ ತಂದಿರುವ ಮೆಣಸಿನಕಾಯಿ ಚೀಲಗಳು (ಸಾಂದರ್ಭಿಕ ಚಿತ್ರ)   

ಬ್ಯಾಡಗಿ: ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 12,798 ಚೀಲ (3,199 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಚೇತರಿಕೆ ಕಂಡು ಬಂದಿದೆ.

ಕಳೆದ ಮಂಗಳವಾರ ಮಾರುಕಟ್ಟೆಗೆ ಕೇವಲ 6,185 ಚೀಲ (1,546 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿತ್ತು.

ಗುರುವಾರ ಪ್ರಾಂಗಣದಲ್ಲಿ 2,332 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಯಿತು. ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 379 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. ಎರಡು ಚೀಲ ಡಬ್ಬಿ ಮೆಣಸಿನಕಾಯಿ ₹34,689, ಒಂದು ಚೀಲ ಕಡ್ಡಿ ಮೆಣಸಿನಕಾಯಿ ₹27,589 ಮತ್ತು ಗುಂಟೂರು ತಳಿ ಮೆಣಸಿನಕಾಯಿ ₹17,609ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.

ADVERTISEMENT

ಡಬ್ಬಿ ಮೆಣಸಿನಕಾಯಿ ಕಳೆದ ಮಂಗಳವಾರಕ್ಕಿಂತ ಗರಿಷ್ಠ ಬೆಲೆಯಲ್ಲಿ, ಅಂದರೆ ಕ್ವಿಂಟಲ್‌ಗೆ ₹4 ಸಾವಿರ ಹೆಚ್ಚಳವಾಗಿದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹28,869, ಬ್ಯಾಡಗಿ ಕಡ್ಡಿ ₹24,889 ಹಾಗೂ ಗುಂಟೂರ ತಳಿ ₹11,609ರಂತೆ ಮಾರಾಟವಾಗಿದೆ.

ಟೆಂಡರ್ ಪ್ರಕ್ರಿಯೆಯಲ್ಲಿ 159 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.