ADVERTISEMENT

ಮೆಣಸಿನಕಾಯಿ ಆವಕ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 16:29 IST
Last Updated 8 ನವೆಂಬರ್ 2024, 16:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬ್ಯಾಡಗಿ (ಹಾವೇರಿ ಜಿಲ್ಲೆ): ಇಲ್ಲಿನ ಮಾರುಕಟ್ಟೆಗೆ ಶುಕ್ರವಾರ 28,431 ಚೀಲ (7,107 ಕ್ವಿಂಟಲ್‌) ಮೆಣಸಿನಕಾಯಿಯನ್ನು ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಹೆಚ್ಚಳವಾಗಿದೆ.

ದೀಪಾವಳಿ ಹಬ್ಬದ ಬಳಿಕ ಹೊಸ ಹಂಗಾಮು ಆರಂಭವಾಗಿದೆ. ಬಳ್ಳಾರಿ, ರಾಯಚೂರು, ಅಜ್ಜಂಪುರ ಮತ್ತಿತರ ಭಾಗದಲ್ಲಿ ಬೆಳೆದ ಮೆಣಸಿನಕಾಯಿಯನ್ನು ಮಾರಾಟಕ್ಕೆ ತರಲಾಗುತ್ತಿದೆ.

ಈ ಬಾರಿಯೂ ಉತ್ತಮ ಫಸಲು ನಿರೀಕ್ಷಿಸಲಾಗಿದೆ. ಜನವರಿ ವೇಳೆಗೆ ಬಂಪರ್‌ ಬೆಳೆ ಬರುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಮೆಣಸಿನಕಾಯಿಗೆ ಉತ್ತಮ ಬೆಲೆ ಸಿಗುತ್ತಿದೆ.

ADVERTISEMENT

ಕಳೆದ ವರ್ಷವೂ ಮಾರುಕಟ್ಟೆಗೆ ಮೆಣಸಿನಕಾಯಿ ಹೆಚ್ಚು ಪೂರೈಕೆಯಾಗಿದ್ದು, ಶೀಥಲೀಕರಣ ಘಟಕಗಳಲ್ಲಿ ಹೆಚ್ಚು ಸಂಗ್ರಹಿಸಲಾಗಿದೆ. ಸದ್ಯ ಮಾರಾಟ ಕಡಿಮೆಯಿದೆ. ಇದರಿಂದ ಬೆಲೆಯಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಶುಕ್ರವಾರ ಮಾರುಕಟ್ಟೆಯಲ್ಲಿ 1,074 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 102 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ.

ಪ್ರತಿ ಕ್ವಿಂಟಲ್‌ ಡಬ್ಬಿ ಮೆಣಸಿನಕಾಯಿ ₹29,200ರಂತೆ, ಕಡ್ಡಿ ಮೆಣಸಿನಕಾಯಿ ₹25,000ರಂತೆ ಮತ್ತು ಗುಂಟೂರು ತಳಿ ಮೆಣಸಿನಕಾಯಿ ₹16,509ಕ್ಕೆ ಮಾರಾಟವಾಗಿವೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.