ADVERTISEMENT

ರಾಣೆಬೆನ್ನೂರು | ರೇಣುಕಾ ಸೊಸೈಟಿ: ₹40 ಲಕ್ಷ ಲಾಭ

ರೇಣುಕಾ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 14:16 IST
Last Updated 26 ಫೆಬ್ರುವರಿ 2024, 14:16 IST
ರಾಣೆಬೆನ್ನೂರಿನ ವರ್ತಕರ ಸಂಘದ ಸಮುದಾಯ ಭವನದಲ್ಲಿ ನಡೆದ ರೇಣುಕಾ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವದ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು
ರಾಣೆಬೆನ್ನೂರಿನ ವರ್ತಕರ ಸಂಘದ ಸಮುದಾಯ ಭವನದಲ್ಲಿ ನಡೆದ ರೇಣುಕಾ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವದ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು    

ರಾಣೆಬೆನ್ನೂರು: ‘ರೇಣುಕಾ ಕೋ ಆಪ್‌ ಸೊಸೈಟಿಯು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅತ್ಯುತ್ತಮ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಇಲ್ಲಿನ ಮಾಗೋಡ ರಸ್ತೆಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ ಹೇಳಿದರು.

ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ವರ್ತಕರ ಸಂಘದ ಸಮುದಾಯ ಭವನದಲ್ಲಿ ಭಾನುವಾರ ನಡೆದ ರೇಣುಕಾ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ರಜತ ಮಹೋತ್ಸವದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸುವುದು ಸುಲಭವಲ್ಲ, 25 ವರ್ಷ ನಿರಂತರವಾಗಿ ಅತ್ಯುತ್ತಮ ಸೊಸೈಟಿ ಎಂಬ ಪ್ರಶಸ್ತಿಗೆ ಹೆಸರಾದ ರೇಣುಕಾ ಸೊಸೈಟಿ ಮುಂದೆ ಶತಮಾನೋತ್ಸವ ಆಚರಿಸಲಿ’ ಎಂದು ಶುಭ ಹಾರೈಸಿದರು.

ADVERTISEMENT

ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ವಾಸುದೇವ ಲದ್ವಾ ಮಾತನಾಡಿ, 1997 ರಲ್ಲಿ 300 ಜನ ಸದಸ್ಯರೊಂದಿಗೆ ₹3.20 ಲಕ್ಷ ಷೇರು ಬಂಡವಾಳದೊಂದಿಗೆ ಆರಂಭವಾದ ಸೊಸೈಟಿ ಇಂದು 1,829 ಸದಸ್ಯರೊಂದಿಗೆ  1.53 ಕೋಟಿ ಷೇರು ಬಂಡವಾಳ ಹೊಂದಿ ದಾಖಲೆಯ ಪ್ರಗತಿ ಹೊಂದಿ, ಜಿಲ್ಲೆಯ ಅತ್ಯುತ್ತಮ ಸೊಸೈಟಿ ಎಂಬ ಹೆಸರು ಪಡೆದಿದೆ’ ಎಂದರು.

‘148 ಲಕ್ಷ ಠೇವುಗಳಿದ್ದು, 40 ಲಕ್ಷ ಲಾಭ ಗಳಿಸಿದೆ. 25 ವರ್ಷ ಸೊಸೈಟಿಯು ಆಡಿಟ್ ವರ್ಗೀಕರಣದಲ್ಲಿ ʻಎʼ ಮಾನ್ಯತೆಯೊಂದಿಗೆ ಗ್ರಾಸ್ ಎನ್‌ಪಿಎದಲ್ಲಿ ಜೀರೊ ಹೊಂದಿದೆ’ ಎಂದು ಹೇಳಿದರು.

ಸಹಾಯಕ ನಿಬಂಧಕ ವಿಕ್ರಂ ಕುಲಕರ್ಣಿ, ಉಪಾಧ್ಯಕ್ಷ ಬಿ.ಎಸ್.ಪಟ್ಟಣಶೆಟ್ಟಿ, ನಿರ್ದೇಶಕ ಬಿ.ಎಸ್.ಸಣ್ಣಗೌಡ್ರ, ಪಾಂಡುರಂಗ ತಾಂಬೆ, ಕಸ್ತೂರಮ್ಮ ಪಾಟೀಲ, ಎನ್‌.ಎಂ.ನೀಲಗಾರ, ವಜ್ರೇಶ್ವರಿ ಲದ್ವಾ, ರೂಪಾ ಪವಾರ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.