ADVERTISEMENT

ಶಿಗ್ಗಾವಿ | ಮತದಾನ ಬಹಿಷ್ಕಾರ: ಮನೆ ಮುಂದೆ ಫಲಕ ಹಾಕಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 6:11 IST
Last Updated 13 ನವೆಂಬರ್ 2024, 6:11 IST
   

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರಿನ ದಂಡಿನಪೇಟೆಯ 500ಕ್ಕೂ ಹೆಚ್ಚು ಮತದಾರರು, ಮತದಾನ ಬಹಿಷ್ಕಾರ ಮಾಡಿದ್ದಾರೆ.

'ನಮಗೆ ಮನೆಯ ಹಕ್ಕುಪತ್ರ ನೀಡಿಲ್ಲ' ಎಂದು ಆರೋಪಿಸುತ್ತಿರುವ ದೂರುದಾರರು, ಮನೆ ಮುಂದೆ ಫಲಕ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

'ಚುನಾವಣಾ ಬಹಿಷ್ಕಾರ ಪ್ರದೇಶ' ಎಂದು ಫಲಕ ಹಾಕಿರುವ ಮತದಾರರು, 'ಉಳುವವನೇ ಭೂಮಿ ಒಡೆಯ ದಲಿತನ ಜಮೀನನ್ನು ಬೇರೊಬ್ಬ ವ್ಯಕ್ತಿಗೆ ಮಾಡಿಕೊಂಡ ಕಂದಾಯ ಇಲಾಖೆ. ಮೂಲ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತೇವೆ ಎಂದು ಉಪ ವಿಭಾಗಾಧಿಕಾರಿಗಳ ಸುಳ್ಳು ಭರವಸೆ' ಎಂದು ಫಲಕ ಹಾಕಿದ್ದಾರೆ.

ADVERTISEMENT

'80 ವರ್ಷದಿಂದ ನಾವು ಇಲ್ಲಿ ವಾಸವಿದ್ದೇವೆ. ನಮಗೆ ಮನೆ ಪಟ್ಟಾ ನೀಡಿಲ್ಲ. ದಾಖಲೆಗಳನ್ನು ಎಲ್ಲವನ್ನೂ ಅಕ್ರಮವಾಗಿ ತಿದ್ದುಪಡಿ ಮಾಡಿದ್ದಾರೆ. ನಮಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಮತದಾನ ಬಹಿಷ್ಕಾರ ಮಾಡಿದ್ದೇವೆ' ಎಂದು‌ ಮಾಲತೇಶ ಕುಂದಗೋಳ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.