ADVERTISEMENT

ಶಿಗ್ಗಾವಿ: ನಾಗರಪಂಚಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 14:40 IST
Last Updated 9 ಆಗಸ್ಟ್ 2024, 14:40 IST
ಶಿಗ್ಗಾವಿ ಪಟ್ಟಣದಲ್ಲಿ ನಾಗಪಂಚಮಿ ಹಬ್ಬದ ಅಂಗವಾಗಿ ಮಹಿಳೆಯರು ನಾಗರ ಕಲ್ಲಿನ ಮೂರ್ತಿಗೆ ಶುಕ್ರವಾರ ಹಾಲೆರೆದರು
ಶಿಗ್ಗಾವಿ ಪಟ್ಟಣದಲ್ಲಿ ನಾಗಪಂಚಮಿ ಹಬ್ಬದ ಅಂಗವಾಗಿ ಮಹಿಳೆಯರು ನಾಗರ ಕಲ್ಲಿನ ಮೂರ್ತಿಗೆ ಶುಕ್ರವಾರ ಹಾಲೆರೆದರು   

ಶಿಗ್ಗಾವಿ: ತಾಲ್ಲೂಕಿನಲ್ಲಿ ನಾಗರ ಪಂಚಮಿ ಹಬ್ಬವನ್ನು ಶುಕ್ರವಾರ ಜನರು ಸಡಗರದಿಂದ ಆಚರಿಸಿದರು.

ಪಟ್ಟಣದ ಈಶ್ವರ ದೇವಸ್ಥಾನ, ಗುಡ್ಡದ ದ್ಯಾಮವ್ವ ದೇವಸ್ಥಾನ, ತಾಲ್ಲೂಕಿನ ಶಿಶುವಿನಹಾಳದ ಶರೀಫಗಿರಿ ಶರೀಫರ, ಗುರುಗೋವಿಂದ ಭಟ್ಟರ ಗದ್ದುಗೆ ಮುಂದೆ ಮತ್ತು ಗಂಗೆಭಾವಿ ದುರ್ಗಾ ಪರಮೇಶ್ವರ, ರಾಮಲಿಂಗೇಶ್ವರ ದೇವಸ್ಥಾನ, ಬಂಕಾಪುರ ಕೋಟೆ ಯಲ್ಲಮ್ಮದೇವಿ ಮತ್ತು ಪೇಟೆ ಯಲ್ಲಮ್ಮ ದೇವಸ್ಥಾನ, ಅರಟಾಳ ಗ್ರಾಮದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ನಾಗಮೂರ್ತಿಗಳಿಗೆ ಪೂಜೆ ಸಲ್ಲಿಸಿದರು.

ಗ್ರಾಮದ ಹೊರ ವಲಯದಲ್ಲಿಯ ಮರಗಳಿಗೆ ಜೋಕಾಲಿ ಕಟ್ಟಿ ಕೊಬ್ಬರಿ ಸರಗಳನ್ನು ಹರಿಯುವ ಸ್ಪರ್ಧೆಗಳು ನಡೆದವು. ಗ್ರಾಮೀಣ ಪ್ರದೇಶದಲ್ಲಿರುವ ವಿವಿಧ ದೇವಸ್ಥಾನಗಳ ಅಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ADVERTISEMENT

ರೈತರು, ತಮ್ಮ ಎತ್ತುಗಳನ್ನು ನದಿ ಹಾಗೂ ಹಳ್ಳಕ್ಕೆ ಕರೆದೊಯ್ದು ಮೈ ತೊಳೆದರು. ಬಣ್ಣದ ರಿಬ್ಬನ್ ಕಟ್ಟಿ ಅಲಂಕರಿಸಿದರು. ಜಮೀನು, ಹೂ, ನದಿ ಮೂಲಗಳ ಬಳಿ ತೆರಳಿದ್ದ ರೈತರು, ಹೆಗಲ ಮೇಲೆ ಕಂಬಳಿ ಹೊತ್ತುಕೊಂಡು ಚರಗ ಚಲ್ಲಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.