ಬ್ಯಾಡಗಿ: ತಾಲ್ಲೂಕಿನ ಶಕ್ತಿ ಕ್ಷೇತ್ರವಾದ ಕದರಮಂಡಲಗಿ ಆಂಜನೇಯ ಸ್ವಾಮಿ ಸನ್ನಿಧಿಗೆ ಸೋಮವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ₹ 2ಲಕ್ಷ ಮೌಲ್ಯದ ‘ಬೆಳ್ಳಿ ಗದೆ‘ ಸಮರ್ಪಿಸಿದರು.
ರಾಜ್ಯವು ಸರ್ವ ಕ್ಷೇತ್ರಗಳಲ್ಲಿಯೂ ಸುಭಿಕ್ಷತೆಯಿಂದ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಸಲ್ಲಿಸಲಾಯಿತು.
ರಾಜ್ಯದ ಎಲ್ಲಾ ಕೆರೆ ಕಟ್ಟೆಗಳು ತುಂಬಿ ಅಂತರ್ಜಲ ಮರಪೂರಣಗೊಂಡು ರೈತರ ಬದುಕು ಹಸನಾಗಲಿ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಆಂಜನೇಯ ದೇವಸ್ಥಾನದ ಪಂಚ ಕಮಿಟಿ ಅಧ್ಯಕ್ಷ ಡಿ.ಸಿ.ಕುಲಕರ್ಣಿ, ಹನಮಂತಪ್ಪ ನಾಯ್ಕರ, ಹನುಮಂತ ಕುರುಡಮ್ಮನವರ, ಗುಡ್ಡಪ್ಪ ಕೋಳೂರು, ವೈ.ಏನ್.ಕುಡಪಲಿ, ಮುಖಂಡರಾದ ಸುರೇಶ ಯತ್ನಳ್ಳಿ, ಶಂಕ್ರಣ್ಣ ಮಾತನವರ, ಶೇಖರಗೌಡ ಗೌಡ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ ಉಜನಿ, ಉಪಾಧ್ಯಕ್ಷ ಭೀಮಣ್ಣ ನಾಯ್ಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.