ADVERTISEMENT

ಕಾಯಕದ ಮೌಲ್ಯ ಹೆಚ್ಚಳಕ್ಕೆ ಜನ ಸೇವೆ ಅವಶ್ಯ: ಶ್ರೀಕಾಂತ ದುಂಡಿಗೌಡ್ರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 13:24 IST
Last Updated 16 ಜೂನ್ 2024, 13:24 IST
ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ಭಾರತ ಸೇವಾ ಸಂಸ್ಥೆ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸರ್ಕಾರಿ ಆಸ್ಪತ್ರೆಯ  ನಿವೃತ್ತ ಮುಖ್ಯವೈದ್ಯ ಡಾ.ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು
ಶಿಗ್ಗಾವಿ ಪಟ್ಟಣದಲ್ಲಿ ಭಾನುವಾರ ಭಾರತ ಸೇವಾ ಸಂಸ್ಥೆ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸರ್ಕಾರಿ ಆಸ್ಪತ್ರೆಯ  ನಿವೃತ್ತ ಮುಖ್ಯವೈದ್ಯ ಡಾ.ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು   

ಶಿಗ್ಗಾವಿ: ಕಾಯಕದ ಮೌಲ್ಯ ಹೆಚ್ಚಳಕ್ಕೆ ಜನ ಸೇವೆ ಮುಖ್ಯ. ಮಾಡುವ ಕಾಯಕ ಯಾವುದೇ ಇರಲಿ, ಅದರಲ್ಲಿ ನಂಬಿಕೆ, ವಿಶ್ವಾಸವಿಟ್ಟು ದುಡಿದಾಗ ಪ್ರತಿಫಲ, ಯಶಸ್ಸು ಸಿಗುವುದು, ಇದಕ್ಕೆ ನಿವೃತ್ತ ಡಾ.ಹನುಮಂತಪ್ಪ ಸಾಕ್ಷಿಯಾಗಿದ್ದಾರೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಭಾರತ ಸೇವಾ ಸಂಸ್ಥೆ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸರ್ಕಾರಿ ಆಸ್ಪತ್ರೆಯ ನಿವೃತ್ತ ಮುಖ್ಯವೈದ್ಯ ಡಾ.ಹನುಮಂತಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದರು.

ಪರೋಪಕಾರ, ಪ್ರಾಮಾಣಿಕ ಸೇವೆ ಜನಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಹೀಗಾಗಿ ಅಧಿಕಾರ, ಅಂತಸ್ತು ಶಾಶ್ವತವಲ್ಲ ಎಂಬುದನ್ನು ತಿಳಿದು, ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಕೆಲಸ ಮಾಡಬೇಕು ಎಂದರು.

ADVERTISEMENT

ಮುಖಂಡರಾದ ನವೀನ್ ಸಾಸನೂರ, ರವಿ ಮಡಿವಾಳರ, ಪ್ರತೀಕ್ ಕೊಳೆಕರ, ವಿಶ್ವನಾಥ ಗಾಣಿಗೇರ, ಶಿವರಾಜ ಪಾಣಿಗಟ್ಟಿ ಸೇರಿದಂತೆ ಭಾರತ ಸೇವಾ ಸಂಸ್ಥೆ ಸದಸ್ಯರು, ವಿವಿಧ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.