ADVERTISEMENT

ತಾಯವ್ವ ದೇವಿ ಜಾತ್ರಾ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 15:42 IST
Last Updated 5 ನವೆಂಬರ್ 2024, 15:42 IST
ತಡಸದ ಏಳು ಮಕ್ಕಳ ತಾಯವ್ವ ದೇವಿಯ ರಥೋತ್ಸವ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು 
ತಡಸದ ಏಳು ಮಕ್ಕಳ ತಾಯವ್ವ ದೇವಿಯ ರಥೋತ್ಸವ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು    

ತಡಸ: ಇಲ್ಲಿನ ತಾಯವ್ವ ದೇವಿ ಜಾತ್ರಾ ಮಹೋತ್ಸವದ ರಥೋತ್ಸವ ಸಕಲ ವಾದ್ಯ ವೃಂದ ಮಜಲುಗಳ ಜೊತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ಜರುಗಿತು.

ಸೋಮವಾರ ಸಂಜೆ ತಾಯಮ್ಮ ದೇವಿಯ ರಥವು ಜಾತ್ರಾ ಸ್ಥಳಕ್ಕೆ ತೆರಳಿತು. ಮಂಗಳವಾರ ಮಧ್ಯಾಹ್ನ ಭಕ್ತರ ನಡುವೆ ವೈಭವದಿಂದ ರಥವನ್ನು ಎಳೆಯಲಾಯಿತು.

ಸುತ್ತ ಮುತ್ತಲಿನ ಗ್ರಾಮಗಳಾದ ಮುತ್ತಳ್ಳಿ, ಅಡವಿ ಸೋಮಾಪೂರ, ಕುನ್ನುರ, ಬಿರೊಳ್ಳು, ಬೆಂಡಲಗಟ್ಟಿ, ಮುಂಡಗೋಡ, ಜೇನಮುರಿ, ಅತ್ತಿವೇರಿ ಗ್ರಾಮಗಳಿಂದ ಎತ್ತು ಚಕ್ಕಡಿ ಹಾಗೂ ಟ್ರಾಕ್ಟರ್ ಮೂಲಕ ಭಕ್ತರು ಹೊರ ಜಿಲ್ಲೆಗಳಿಂದ ಆಗಮಿಸಿದ್ದರು.

ಮನೆಯಲ್ಲಿ ತಯಾರಿಸಿದ ಹೋಳಿಗೆ, ಕಡಬು, ತರತರಹದ ಪಲ್ಲೆ, ಚಟ್ನಿ ತಯಾರಿಸಿ ಸಾಮೂಹಿಕ ಭೋಜನವನ್ನು ಈ ಜಾತ್ರೆಯಲ್ಲಿ ಸವಿಯಲಾಯಿತು.

ADVERTISEMENT

ತಾಯವ್ವ ದೇವಿಯ ರಥೋತ್ಸವದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಯವ್ವ ದೇವಿಯ ದರ್ಶನ ಪಡೆದು ರಥವನ್ನು ಎಳೆದರು.

ತಡಸದ ಏಳು ಮಕ್ಕಳ ತಾಯವ್ವ ದೇವಿಯ ರಥೋತ್ಸವ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.