ADVERTISEMENT

ಕಲಾವಿದ ದಿ.ಟಿ.ಬಿ.ಸೊಲಬಕ್ಕನವರ ಪುಣ್ಯಸ್ಮರಣೆ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 16:02 IST
Last Updated 20 ನವೆಂಬರ್ 2024, 16:02 IST
ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಉತ್ಸವ ರಾಕ್ ಗಾರ್ಡನ್‌ನ ರಾಜ್‌ಕುಮಾರ್ ಸರ್ಕಲ್‌ನಲ್ಲಿ ದಿ.ಟಿ.ಬಿ.ಸೊಲಬಕ್ಕನವರರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮ ಮಂಗಳವಾರ ಆಚರಿಸಲಾಯಿತು
ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಉತ್ಸವ ರಾಕ್ ಗಾರ್ಡನ್‌ನ ರಾಜ್‌ಕುಮಾರ್ ಸರ್ಕಲ್‌ನಲ್ಲಿ ದಿ.ಟಿ.ಬಿ.ಸೊಲಬಕ್ಕನವರರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮ ಮಂಗಳವಾರ ಆಚರಿಸಲಾಯಿತು   

ಶಿಗ್ಗಾವಿ: ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ ಮಹಾನುಭಾವರ ಪುಣ್ಯಸ್ಮರಣೆಯನ್ನು ಆಚರಿಸುವುದು ಎಲ್ಲರ ಕರ್ತವ್ಯ ಎಂದು ಉತ್ಸವ ರಾಕ್ ಗಾರ್ಡನ್‌ನ ಮುಖ್ಯಸ್ಥೆ ವೇದಾರಾಣಿ ದಾಸನೂರ ಹೇಳಿದರು.

ತಾಲ್ಲೂಕಿನ ಗೊಟಗೋಡಿ ಉತ್ಸವ ರಾಕ್ ಗಾರ್ಡನ್‌ನ ರಾಜ್‌ಕುಮಾರ್ ಸರ್ಕಲ್‌ನಲ್ಲಿ ಮಂಗಳವಾರ ನಡೆದ ದಿ.ಟಿ.ಬಿ.ಸೊಲಬಕ್ಕ್ಕನವರ 4ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಮಾತನಾಡಿದರು.

ಜ್ಞಾನ ಪೂರ್ಣಂ ಜಗಜ್ಯೋತಿ, ನಿರ್ಮಲ ಮನಸ್ಸುಗಳಿಗೆ ಕರ್ಪೂರದ ಆರತಿ ಎಂಬಂತೆ ನಾನಾ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅಪರೂಪದ ಕೊಡುಗೆ ನೀಡಿದ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಅಣು ಸಮರದ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಲು 1986ರಲ್ಲಿ ಟಿ.ಬಿ.ಸೊಲಬಕ್ಕನವರ ಅವರು ‘ನೂರು ಅಡಿಗಳ ಬಣ್ಣದ ನಡೆ, ಅಣು ಸಮರಕ್ಕೆ ಜನತೆ ತಡೆ’ ಎಂಬ ತೈಲವರ್ಣದ ಪೇಟಿಂಗ್‌ ರಚಿಸಿದ್ದರು. ಇದು ಭಾರತದಾದ್ಯಂತ ಪ್ರದರ್ಶನಗೊಂಡಿತ್ತು. ಈ ಕಲಾಕೃತಿಯನ್ನು ಬೆಂಗಳೂರು ಸಮುದಾಯ ತಂಡದವರು ಹಿರೋಶಿಮಾ, ನಾಗಸಾಕಿಯಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ಪ್ರದರ್ಶಿಸಿದ್ದರು. ಇದು ಕಲಾವಿದನ ಜ್ಞಾನ ಶಕ್ತಿಯ ಮಹತ್ವ ಎಂತಹುದು ಎಂದು ತಿಳಿಸುತ್ತದೆ’ ಎಂದರು.

ಗಾರ್ಡನ್ ಮೆನೇಜರ್ ಬಸವರಾಜ ಮಡಿವಾಳರ ಅವರು ಸೊಲಬಕ್ಕನವರೊಂದಿಗಿನ ಸ್ಮರಣೀಯ ಒಡನಾಟವನ್ನು ಸ್ಮರಿಸಿ, ಹಂಚಿಕೊಂಡರು.

ಚಿದಾನಂದ ಹಳ್ಳಿ, ನಜೀರ್, ಮಾಲತೇಶ ಕೂಡಲ್, ಮಂಜುನಾಥ ಬಾರ್ಕಿ, ಬಸವರಾಜ ಅರಳಿ, ಮಂಜು ಇಂದೂರ, ಮಂಜು ಸೂರಗೊಂಡ, ವಿರೂಪಾಕ್ಷ ಮುದಗಣ್ಣನವರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.