ADVERTISEMENT

ರಾಣೆಬೆನ್ನೂರು: ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 15:40 IST
Last Updated 30 ಆಗಸ್ಟ್ 2021, 15:40 IST
ಮೃತ ಯುವಕರ ಕುಟುಂಬದವರು ಶವದ ಎದುರು ರೋಧಿಸಿದರು
ಮೃತ ಯುವಕರ ಕುಟುಂಬದವರು ಶವದ ಎದುರು ರೋಧಿಸಿದರು   

ರಾಣೆಬೆನ್ನೂರು: ನೀರಿನಲ್ಲಿ ಕೊಚ್ಚಿ ಹೋಗಿದ್ದ ಹಾವೇರಿ ತಾಲ್ಲೂಕು ಗುತ್ತಲ ಗ್ರಾಮದ ಪಕ್ಕೀರೇಶ ಹೊನ್ನಪ್ಪ ಮಣ್ಣೂರ ಹಾಗೂ ಯಲ್ಲಪ್ಪ ಪಕ್ಕೀರಪ್ಪ ಕುಂಬಾರ ಅವರ ಶವ ಸೋಮವಾರ ಪತ್ತೆಯಾಗಿದೆ.

ಸ್ಥಳೀಯ ನುರಿತ ಈಜುಗಾರರಾದ ಧರ್ಮಪ್ಪ ಕುಂಚೂರ, ವಿರುಪಾಕ್ಷಪ್ಪ ಬನ್ನಿಮಟ್ಟಿ, ಹನುಮಂತಪ್ಪ ಭಜಂತ್ರಿ, ಬಸಪ್ಪ ಹರಿಜನ ಬುಟ್ಟಿದೋಣಿಯ ಮೂಲಕ ನದಿಗೆ ಇಳಿದು ಶವ ಪತ್ತೆ ಮಾಡಿದರು. ಗ್ರಾಮೀಣ ಪಿಎಸ್‌ಐ ವಸಂತ ಹಾಗೂ ಸಿಬ್ಬಂದಿ ಮಾರ್ಗದರ್ಶನ ನೀಡಿದರು.

ಮುಗಿಲು ಮುಟ್ಟಿದ ಆಕ್ರಂದನ: ಇಬ್ಬರು ಯುವಕರ ಮೃತ ದೇಹ ನದಿಯಿಂದ ಹೊರ ತರುತ್ತಲೇ ಸಂಬಂಧಿಕರು ಮತ್ತು ಹೆತ್ತವರ ಆಕ್ರಂದನ ಮುಗಿಲು ಮಟ್ಟಿತು. ಎರಡೂ ಕುಟುಂಬಕ್ಕೆ ಒಬ್ಬೊಬ್ಬರೇ ಗಂಡು ಮಕ್ಕಳಾಗಿದ್ದಾರೆ.

ADVERTISEMENT

ಯಲ್ಲಪ್ಪ ಪಕ್ಕೀರಪ್ಪ ಕುಂಬಾರ ಈತನಿಗೆ ಮದುವೆಯಾಗಿದ್ದು ಅವರಿಗೆ ಪುತ್ರ, ಪುತ್ರಿ ಇದ್ದಾರೆ. ಪಕ್ಕಿರೇಶ ಹೊನ್ನಪ್ಪ ಮಣ್ಣೂರ ಮದುವೆಯಾಗಿಲ್ಲ. ಈತನು ಪದವಿ ಮುಗಿಸಿ ಸೈನಿಕನಾಗುವ ಕನಸ್ಸು ಕಂಡಿದ್ದನು. ಸೇನೆ ಸೇರಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ.

‘ನನ್ನ ಮಗ ದೇಶ ಸೇವೆ ಮಾಡುವ ಕನಸು ಹೊಂದಿದ್ದನು’ ಎಂದುಪೋಷಕರು ರೋಧಿಸಿದ ದೃಶ್ಯ ಮನಕಲಕುವಮತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.