ಬ್ಯಾಡಗಿ: ‘ದುಃಖ ಮತ್ತು ಸುಖದಲ್ಲಿ ಭಾಗಿಯಾದವರು ನಿಜವಾದ ಸಂತರು. ಹೀಗಾಗಿ ದ್ವೇಷಿಸದೆ ಪ್ರೇಮದಿಂದ ಕಾಣಿ’ ಎಂದು ಕೊಪ್ಪಳದ ಗವಿ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಧ್ಯಾತ್ಮ ಪ್ರವಚನದ 2ನೇ ದಿನವಾದ ಶುಕ್ರವಾರ ಮಾತನಾಡಿದ ಅವರು, ‘ಇನ್ನೊಬ್ಬರಿಗೆ ನೋವಾಗದಂತೆ ಮಾಡುವುದು ನಿಜವಾದ ಪೂಜೆಯಾಗಿದೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ’ ಎಂದರು.
‘ಪ್ರೀತಿಸುವ ಹೃದಯ ಆರೋಗ್ಯವಾಗಿರುತ್ತದೆ. ಆದರೆ ಎದೆಯೊಳಗೆ ದ್ವೇಷ ಇರೋದ್ರಿಂದ ನಾನಾ ಕಾಯಿಲೆಗಳಿಗೆ ಮನುಷ್ಯ ತುತ್ತಾಗಬೇಕಾಗುತ್ತದೆ. ದ್ವೇಷವಿದ್ದಾಗ ಹತ್ತಿರವಿದ್ದರೂ ದೂರವಾಗುತ್ತಾರೆ, ಆದರೆ ಪ್ರೇಮವಿದ್ದಾಗ ದೂರವಿದ್ದರೂ ಹತ್ತಿರವಾಗುತ್ತಾರೆ. ಇದು ಪ್ರೇಮದ ಪವಾಡ, ಹೀಗಾಗಿ ದ್ವೇಷ ಮರೆತು ಪ್ರೀತಿಯಿಂದ ಇರಬೇಕು’ ಎಂದು ಶ್ರೀಗಳು ಸಲಹೆ ನೀಡಿದರು.
‘ಧರ್ಮಕ್ಷೇತ್ರವಾದ ಮಹಾಭಾರತ ಅಣ್ಣನ ಮಕ್ಕಳು ಬ್ಯಾರೆ, ನನ್ನ ಮಕ್ಕಳು ಬ್ಯಾರೆ ಅಂದಿದ್ದಕ್ಕೆ ಕುರುಕ್ಷೇತ್ರವಾಯಿತು. ತನ್ನ ಮಕ್ಕಳಂತೆ ಎಲ್ಲರೂ ಅಂದಿದ್ದರೆ ಮಹಾಭಾರತವೇ ಆಗುತ್ತಿರಲಿಲ್ಲ. ಸೊಸೆ ಮತ್ತು ಮಗಳು ಬ್ಯಾರೆ ಅಂದಿದ್ದಕ್ಕೆ ಮನೆ ಒಡೆಯುತ್ತದೆ, ಇದನ್ನು ಕೈಬಿಟ್ಟು ಇಬ್ಬರೂ ಒಂದೇ ಅಂದ್ರೆ ಸುಖವಾಗಿ ಜೀವಿಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.